Posts

Showing posts from 2009

ಎಷ್ಟು ದಿವಸ?.

Image
ಹಬ್ಬ ಬಂತೆಂದರೆ ಎಲ್ಲಿಲ್ಲದ ಹರುಷ! ಅದೇಕೋ ಇಲ್ಲ ಈ ವರುಷ. ನೆನಪಿದೆಯೇ ತಿಂದು ಸಂಭ್ರಮಿಸಿದ ಪಾಯಸ? ಪಾಪಿ ಬಡತನದ ರಾಮರಸ. ಕೇಳಬೇಕೇ ಪ್ರೀತಿಯ ಸಮರಸ? ಜೊತೆಗೆ ದುಡಿಮೆಯ ಛಲವರಿತ ಸಂತಸ. ಬರಲಾರದೇಕೆ ಈ ದಿವಸ? ಹಿಗ್ಗಿ ಹೀರಿದ ಆ ದಿವಸ... ಬರಲಾರದು ಆ ದಿವಸ... ಮರುಳೇ ಇಂದಿಗೆ ಅವಳು ನಕ್ಕು ದೂರಾಗಿ ಎಷ್ಟು ದಿವಸ?.

"ನೆಮ್ಮದಿಯ ನೆಲೆ"

ಕಡ ತಂದು ಖಾರ ಅರೆದ ಕೈ ಕರುಳ ಕುಡಿಗೆ ತುತ್ತು ನೀಡಿತ್ತು, ಕೂಲಿ ಮಾಡಿ ಕಾಸು ತಂದ ಮೈ ಮಾಗಿ ಮರುಗಿತ್ತು, ಕಡು ಬಡತನಕೆ ಆಸರೆ ಅಂದು ದೊರೆತಿತ್ತು, ಅದು.., ಕಷ್ಟವನರಿತ ಮಕ್ಕಳ ಭವಿತವ್ಯಕ್ಕೊಂದು ರೂಪು ನೀಡಿತ್ತು, ಕಾಸು ಕಂಡ ಜೀವ ಈಗ ತೊದಲಿತ್ತು, ಬಡತನದಲ್ಲೇ ನೆಮ್ಮದಿ ನೆಲೆಸಿತ್ತು. ಕಾರಣ ಕುರುಡು ಕಾಂಚಾಣ ಕುಣಿದಿತ್ತು.

ಪರಿ(ತಪಿ)ತಪ್ಪಿಸಿದವಳು..!

ಕುಡಿನೋಟದಿ ಕೆನ್ನೆ ಕೆಂಪಾಗಿಸಿದವಳು... ಮೃದು ಮಾತಲ್ಲೇ ಮನವ ಕದ್ದವಳು... ಪ್ರೀತಿಯ ಪರಿ ಏನೆಂದು ಅರಿಯದವಳು... ಸಜ್ಜನಿಕೆಯ ನಾಟ್ಯ ಮೆರೆದವಳು... ತನು ಜಾರಿ ಸೆರಗಲ್ಲಿ ಬಿಗಿದವಳು... ತುಸು ಹೆಚ್ಚೇ ಕನಸಿಗೆ ಕದ್ದೊಯ್ದವಳು... ಬಿಗುಮಾನದ ಬಿಂಕ ಬಿಡದವಳು... ಚೆಲುವೆ, ಅವಳು.. ನನ್ನವಳು, ಪ್ರೇಮದ ಸಿರಿಯವಳು.

ಕಾಡಿದವಳು..!

Image
ಒಲವ ಹಂಬಲಿಸಿ ತಾರುಣ್ಯ ಮೆರೆದವಳ ಕುಡಿನೋಟಕೆ ಮತ್ತೆ ಕಾದು ಕುಳಿತ ಮನ ತಪ್ಪಿಯೂ ಊಹಿಸಲಿಲ್ಲ... ಅವಳು ಅಷ್ಟು ಕಾಡುತ್ತಾಳೆಂದು, ತುಸು ಒಲ್ಲೆನೆಂದರೂ.. ತನು ತಾಳೆ ಹಾಕಿ ಹೇಳುತ್ತಿದೆ, ಅವಳು... ಮತ್ತೆ... ಮತ್ತೆ ನಿನ್ನನ್ನೇ ನೋಡುತ್ತಿರುವಳೆಂದು.

ಉಳಿದಿರುವುದೊಂದೇ

ಮನದಿ ಮುದ್ದಿಸಿ ಮೌನ ಮೆರೆದಾಕೆ ಕಣ್ಣುಬ್ಬ ಏರಿಸಿ ಸುಳ್ಳೇ ಜರಿದಾಕೆ ಅಪ್ಪಿ.. ಒಪ್ಪಿ.. ತಪ್ಪಾಯಿತು ಎಂದಾಕೆ! ಬಯಕೆಯ ಬಸುರಿಯ ಬೇಗೆ ತಡೆದಾಕೆ ಸನಿಹ ದೂರವೆರಡೂ ತೊರೆದಾಕೆ ಭಯದಿ ನೋವ ಏರಿಸಿ ಇಳಿಸಿದಾಕೆ ಬರುವಳೇ ಎನ್ ಬಾಳಲಿ ಸುಖದಾರಿ ತೋರೋಕೆ...? ಛೇ, ಉಳಿದಿರುವುದೊಂದೇ ಬರೀ... ನಂಬಿಕೆ... ನಂಬಿಕೆ..

ಬಯಸಿದ್ದು ತಪ್ಪಾ?

ನಗುವ ಆ ಮೊಗದಲಿ ಸುಗ್ಗಿಯ ಸ್ವಾದ ತುಂಬಿತ್ತು ನುಡಿದವಳ ಸ್ವರದಲ್ಲಿ ಚಿಲಿಪಿಲಿ ನಿನಾದ ಚಿಮ್ಮಿತ್ತು ಭೂರಮೆಯ ಒಡಲಲ್ಲಿ ಅವಳ ಕಲರವ ಮೇಳೈಸಿತ್ತು ತುಂಟ ನೋಟದಲ್ಲಿ ಎನ್ನ ಮನ ಭ್ರಮಿಸಿತ್ತು ಬಯಸಿದಾಕೆಯ ಮನ ಬೆಂದ ನೋವಾಗಿತ್ತು ಓ ಮರುಳೇ...ಬಿಡು ಮುಂದೆ ಮುಟ್ಟಲು ಗುರಿಯೊಂದಿತ್ತು.