Posts

ನಿಜವಾದ ಪ್ರಜಾಪ್ರಭುತ್ವ ಯಾವುದು..?

 ನಿಜವಾದ ಪ್ರಜಾಪ್ರಭುತ್ವ ಯಾವುದು..?  ನಮ್ಮ್ ದೇಶದಲ್ಲಿ ಇದರ ಮೂಲ ಅರ್ಥನ ತುಂಬಾ ಜನ ತಪ್ಪಾಗಿ ತಿಳ್ಕೊಂಡಿದ್ದಾರೆ.  ದೇಶದಲ್ಲಿ ಆಗಾಗ ಎಲೆಕ್ಷನ್ ಆಗ್ತಾವೆ, ನಾವ್ ಕ್ಯೂ ನಲ್ಲಿ ನಿಂತು ಓಟಾಕ್ತಿವಿ, ಆಗ ಆ ದೇಶ ಡೆಮೋಕ್ರ್ಯಾಟಿಕ್ ಅಂದ್ರೆ ಪ್ರಜಾಪ್ರಭುತ್ವ ದೇಶ ಅಂತ ಕೆಲ ಜನ ತಿಳ್ಕೊಂಡಿದ್ದಾರೆ. ಆದ್ರೆ ನಿಮಗೆ ಗೊತ್ತಾ..? ಉತ್ತರ ಕೊರಿಯಾ ದಲ್ಲೂ ಎಲೆಕ್ಷನ್ ಆಗುತ್ತೆ. ನಾನ್ ಇದನ್ನ ಉತ್ಪ್ರೇಕ್ಷೆ ಯಾಗಿ ಹೇಳ್ತಿಲ್ಲ. ನಿಮಿಗೆ ತಮಾಷೆ ಅನ್ನಿಸುತ್ತೆ ನಾನ್ ಹೇಳೋದು. ಅಲ್ಲಿ ಪಕ್ಕಾ 100 ಪರ್ಸೆಂಟ್ ಓಟಿಂಗ್ ನಡೆಯುತ್ತೆ.  ಅಲ್ಲೂ ಕೂಡಾ ನಮ್ಮಂತೆ ಎಲೆಕ್ಷನ್ ನಡಿತಾ ಇರ್ತಾವೆ. ಆದ್ರೆ 50 ರಿಂದ 80 90 ಪರ್ಸೆಂಟ್ ಒಟಿಂಗ್ ಆಗಲ್ಲ. 100 ಪರ್ಸೆಂಟ್ ಒಟಿಂಗ್ ಆಗೇ ಆಗುತ್ತೆ. ಆ ದೇಶದ ಯಾರಾದ್ರೂ ಒಬ್ಬ ಪ್ರಜೆ ಅಲ್ಲಿ ನಿಂತ ಅಧಿಕೃತ ಅಭ್ಯರ್ಥಿ ಗೆ ಓಟ್ ಹಾಕ್ಲಿಲ್ಲ ಅಂದ್ರೆ ಅವ್ರು ದೇಶ ವಿರೋಧಿಗಳು ಅಂತಾ ಮಾರ್ಕ್ ಆಗ್ತಾರೆ. ಅವ್ರು ಜಾಬ್ ಕಳ್ಕೊಳ್ತಾರೆ. ಇಲ್ಲಿ ಜಾಬ್ ಮಾಡೋರಿದ್ರೆ ತಾನೇ ಅಂತಾ ಮೂಗ್ ಮುರಿಬೇಡಿ. ಅವ್ರು ಮನೆ ಕಳ್ಕೊಳ್ತಾರೆ. ಓಟ್ ಹಾಕ್ದೆ ಮನೇಲಿ ಮಜಾ ಮಾಡೋರೂ ನಮ್ ದೇಶದಲ್ಲಿ ಇದ್ದಾರಲ್ವಾ..? ಅಲ್ಲಿ ಪ್ರಜಾಪ್ರಭುತ್ವ ಅನ್ನೋ ಒಂದು ವರ್ಡ್ ಅಷ್ಟೇ ಅಲ್ಲ ಆ ದೇಶದ ಅಧಿಕೃತ ಹೆಸರು ಕೂಡಾ ಹೌದು. ಆಶ್ಚರ್ಯ ಆಗ್ತಿದ್ಯಾ. ಪ್ರಜಾಪ್ರಭುತ್ವ ಪದ ಉತ್ತರ ಕೊರಿಯಾ ದೇಶದ ಹೆಸರಲ್ಲಿ ಇದೆ. ಉತ್ತರ ಕೊರಿಯಾ ತನ್ನನ್ನು ತಾನು DPRK ಅಂತಾ ಕರೆದುಕೊಳ್ಳ

ಪಿಕ್ಚರ್ ಟಿಕೆಟ್ಗಿಂತ ಪಾಪ್ ಕರ್ನ್ ರೇಟ್ ಜಾಸ್ತಿ ಯಾಕೆ?

 ಮೂಗಿಗಿಂತ ಮೂಗುತಿ ಭಾರ ಅನ್ನೋಹಾಗೆ... ಪಿಕ್ಚರ್ ಗಿಂತ ಪಾಪ್ ಕರ್ನ್ ರೇಟ್ ಜಾಸ್ತಿ ಯಾಕೆ?... ಮಾಲ್ ಗಳಲ್ಲಿ ಪಿಕ್ಚರ್ ನೋಡೋಕ್ ಹೋಗೋರಿಗೆ ಈ ಪ್ರಶ್ನೆ ಬಂದೇ ಬಂದಿರುತ್ತೆ. ರೀಸನ್ is ಸೊ ಸಿಂಪಲ್. ಮೂವಿ ಟಿಕೆಟ್ ರೇಟ್ ಜಾಸ್ತಿ ಆದ್ರೆ ಥೇಟರ್ ಗೆ ಬರೋರ್ ಸಂಖ್ಯೆ ಕಡಿಮೆ ಆಗುತ್ತೆ. ಅದ್ಕೆ ಪಾಪ್ ಕಾರ್ನ್ ರೇಟ್ ಜಾಸ್ತಿ ಅನ್ನಬಹುದು. ಆದ್ರೆ ಅದಲ್ಲ...  ಮೇಜರ್ ರೀಸನ್ ಬೇರೆ ಇದೆ. ಅದೇ ಮಾಲ್ ಗಳ ಬಿಸಿನೆಸ್ ಟೆಕ್ನಿಕ್. ಮೂವಿ ಟಿಕೆಟ್ ಕಲೆಕ್ಷನ್ ನಿಂದ ಬರೋ ಹಣದಲ್ಲಿ ಇಂತಿಷ್ಟು ಪರ್ಸೆಂಟ್  ಪ್ರೊಡಕ್ಷನ್ ಹೌಸ್ ಗೆ ಮಾಲ್ ನವರು ಕೊಡಬೇಕು.  ಪಿವಿಆರ್ ಅಥವಾ ಇನ್ನೊಕ್ಸ್ ನಂತ ಮಲ್ಟಿಪ್ಲಕ್ಸ್ ನಲ್ಲಿ ಒಂದು ಫಿಲಂ ರಿಲೀಸ್ ಆದ್ರೆ. ಫಸ್ಟ್ ವೀಕ್ ನ  ಕಲೆಕ್ಷನ್ ನ 50% ಅನ್ನು ಫಿಲಂ ಡಿಸ್ಟ್ರಿಬ್ಯೂಟರ್ ಗೆ ಕೊಡಬೇಕು. ಅವಾಗ ಮಾಲ್ ಗಳು ಫಿಲಂ ಟಿಕೆಟ್ ನಿಂದ ಜಾಸ್ತಿ ಹಣ ಮಾಡೋಕೆ ಆಗಲ್ಲ. ಆಗ ಮಾಲ್ ನವರಿಗೆ ಹೊಳೆದ ಐಡಿಯಾನೇ ಇದು.. ಅದೇ ಪಾಪ್ ಕರ್ನ್ ರೇಟ್ ಹೆಚ್ಚಿಸೋದು. ಅರೆ ರೇಟ್ ಹೆಚ್ಚು ಮಾಡಿದ್ರೆ ಜನ ಪಾಪ್ ಕರ್ನ್ ಕೊಳ್ಳಲ್ಲ. ಸುಮ್ನೆ ಜನ ಬಂದವರು ಪಿಕ್ಚರ್ ನೋಡಿ ಮನೆಗೋದ್ರೆ ಲಾಸ್ ಮಾಲ್ನವರಿಗೆ ಅನ್ನಬಹುದು.  ಅಸಲಿ ಮ್ಯಾಟ್ರು ಇರೋದೇ ಇಲ್ಲಿ. ಕಡಿಮೆ ಬೆಲೆ ಮಾಡಿದ್ರೆ ಜನ ಮುಗಿಬಿಳ್ತಾರೆ. ಕ್ಯೂ ನಿಲ್ತಾರೆ. ಇಂಟರ್ ವಲ್ ಟೈಮ್ ಟೈಮ್ ಕಡಿಮೆ ಇರೋದ್ರಿಂದ ಕೌಂಟರ್ ಜಾಸ್ತಿ ಮಾಡ್ಬೇಕಾಗುತ್ತೆ. ಅಲ್ಲಿ ಸರ್ವ ಮಾಡೋಕೆ ಎಂಪ್ಲೋಯ್ಸ್ ಮತ್ತ್ ಅವ್ರು

ಡೂಪ್ಲಿಕೇಟ್ ಚಂದ್ರ - ಚೀನಾಗೆ ಬಂದ

 ಡೂಪ್ಲಿಕೇಟ್ ಗೆ ಇನ್ನೊಂದು ಹೆಸ್ರೇ ಚೀನಾ.. ಅಣ್ಣ ಇದು ಚೀನಾ ಮಾಡ್ಲಾ ಅಂತ ಕೇಳೋಷ್ಟು ಮಟ್ಟಿಗೆ ಕುಖ್ಯಾತಿ. ಈಗ ಈ ಚೀನಾ ಡೂಪ್ಲಿಕೇಟ್ ಚಂದ್ರ ನನ್ನೇ ಸೃಷ್ಟಿ ಮಾಡಿದೆ. ಭೂಮಿ ಮೇಲೆ ಚೈನಾ ಒಂದು ಅದ್ಭುತ ಚಂದ್ರನನ್ನ ಸೃಷ್ಟಿಸಿದೆ. ಇದೊಂದು ಕೃತಕ ಚಂದ್ರ. ಸಂಶೋಧನೆಗೆಂದು ಪೂರ್ವ ಜಾನ್ಸು ನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಪ್ರಖರ ಅಯಸ್ಕಾತಿಯ  ಪ್ರಕ್ರಿಯೆ ಅಂದ್ರೆ ಪವರ್ ಫುಲ್ ಮಗ್ನೆಟಿಕ್ ಫೀಲ್ಡ್ ಮುಖಾಂತರ ಭೂಮಿಯ ಗುರುತ್ವಾಕರ್ಷಣೆ ಕಡಿಮೆ ಮಾಡುವ ಬಹು ದೊಡ್ಡ ಸಾಹಸಕ್ಕೆ ಅದು ಕೈ ಹಾಕಿದೆ. ನಿಜ ಹೇಳ್ಬೇಕು ಅಂದ್ರೆ, ನಮ್ಮ್ ಚಂದ್ರನ ಮೇಲೆ 1/6 ರಷ್ಟು ಗುರುತ್ವಾಕರ್ಷಣೆ ಬಲ ಇದೆ. ಇಲ್ಲೂ ಸಂಶೋಧನೆ ಮೂಲಕ ಗುರುತ್ವಕರ್ಷಕ್ಬಲವನ್ನ 1/6 ಆರನೇ ಒಂದದರಷ್ಟುಕ್ಕೆ ಇಳಿಸಲಾಗ್ತಿದೆ. ಮತ್ತೆ ಚಂದ್ರನ ಮೇಲಮೈ ನಲ್ಲಿರುವಂತೆ ಧೂಳು ಮತ್ತು ಕಲ್ಲು ಬಂಡೆಗಳನ್ನ ಇದರ ಪಡಸಾಲೆಯಲ್ಲಿ ಅಂದ್ರೆ ಒಂದು ರೂಮು ಅಥವಾ ಕೋಣೆ ಅಂತಾನೂ ಕರೀಬಹುದು ಅಲ್ಲಿ ನಿರ್ಮಿಸಲಾಗಿದೆ. ಅಲ್ಲಿ ಹೋದ್ರೆ ಪಕ್ಕಾ ಚಂದ್ರ ನೆ ಮೇಲೆ ಇದ್ದೀವಿ ಎನ್ನುವಂತಹ ಅನುಭವ ಆಗ್ಬೇಕು ಆ ರೀತಿ ತಯಾರು ಮಾಡಿದೆ. ಸಂಶೋಧಕರ ಪ್ರಕಾರ 2000 ನೇ ಇಸವಿಯಿಂದ ಭೌತಿಕ ಅಧ್ಯಯನ ಅಂದ್ರೆ ಫಿಸಿಕ್ಸ್ ಎಕ್ಸ್ಪ್ರೆರಿಮೆಂಟ್ ನಿಂದ ಪ್ರೇರಣೆಗೊಂಡಿದ್ದರಂತೆ. ಮಂಚೆಸ್ಟರ್ ಯೂನಿವರ್ಸಿಟಿ ಯ ಭೌತ ವಿಜ್ಞಾನಿ ಅಡ್ರೆ ಆಯಸ್ಕಾತ ಬಳಸಿ.. ಗುರುತ್ವಆಕರ್ಷಣೆ ಬಲ ಕುಗ್ಗಿಸಿ ಕಪ್ಪೆಯೊಂದನ್ನ ತೆಲಿಸುವ ಪ್ರಯತ್ನ ಮಾಡಿದ್ರಂತೆ. ಈಗ

ಭುವಿಗೆ ಭಾರ..!

 ಬೇಡದ ಮನಸಿಗೆ ಒಲ್ಲದ ದಾಸನಾಗಿ ನಿತ್ಯವೂ ನೊಂದ ಬೆಲ್ಲದ ಕಸವಾಗಿ ಅದುಮಿಟ್ಟ ನೋವು ಒತ್ತರಿಸಿ ಚಿಗುರಾಗಿ ಬಂದ ಕಾಸಿಗೆ ಕನಸು ಕುರುಡಾಗಿ  ಬೆವರು ಹರಿಸಿ ದುಡಿದು ಬೆಂಡಾಗಿ ಸಾಗಿದ ಬದುಕು... ಅಂತ್ಯಕ್ಕೆ ಮುಂದಾಗಿ...ಛೇ! ಅಕ್ಕರೆಯ ಮಗು ನೆನಪಾಗಿ  ಮುತ್ತಿರಿಸಿ ಮಗುವಾಗಿ ಬೇಡಲು ಬೇಕೆನಗೆ ಚೈತನ್ಯ ವರವಾಗಿ ಮುಸುಕಿದ ದಾರಿಯೊಳು... ಬಾಳು ಮಬ್ಬಾಗಿ ಕರಗುವ ಮುನ್ನ... ಮನಸು ಕುಬ್ಜ್ಆಗಿ ಹೋಗುವ ಮುನ್ನ... ಭುವಿಗೆ ಭಾರವಾಗಿ ಸುಮ್ಮನೆ... ಸಾಧಿಸದೆ ಸಣ್ಣ ಕಸವಾಗಿ ಹೋಗುವ ಮುನ್ನ... ಭುವಿಗೆ ಭಾರವಾಗಿ

ಕಟ್ಟಿಟ್ಟ ಬುತ್ತಿ

ಕಟ್ಟಿಟ್ಟ ಬುತ್ತಿ ಲೆಕ್ಕ ಕೇಳಲು ಕೋಟಿ ಕೋಟಿ, ಸಾಮಾನ್ಯವೇ... ಹೊಡೆದ ಲೂಟಿ. ಬಂದು ಕಾಲಡಿ ಬೀಳಲು ಬೇಕಾಬಿಟ್ಟಿ, ಸಾಕು... ಮೆರೆಯಲು ಅವರಿವರ ಎತ್ತಿ-ಕಟ್ಟಿ. ಆಗಿರುವಾಗ ಆತ... ಹೊಗಳು ಭಟ್ಟರಿಗೆ ರಾಜಕೀಯ ಜಗ-ಜಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಅಂತ್ಯ ನೆನಪಾಗಲು.. ಭಾಷಣದ ಭರಾಟೆ ಬಿತ್ತಿ, ಸೋತಾಗ ನಿಂತು ಕೈ ಕಟ್ಟಿ..! ಸೋಲುವವರ ಗೆಲ್ಲಿಸಿ- ಗೆಲ್ಲುವವರ ಸೋಲಿಸಿ ಮೆರೆದಾಗ ಪಂಥ ಕಟ್ಟಿ, ಎಸೆದಿರಲು ಮೂಲೆಗೆ... "ಭರವಸೆ"ಯ ಮೂಟೆ ಕಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಸ್ಥಾನ ಸಿಗದಾಗ ಗುಂಪುಗಟ್ಟಿ, ಪಕ್ಷ ಪುಡಿಗಟ್ಟಿ, ನಿಷ್ಠರೆನ್ನಿಸಿಕೊಳ್ಳುವರ ಹೆಡೆ ತಟ್ಟಿ, ಹೊರಟಾಗ ಅಂದುಕೊಳ್ಳಲು ನಾನಿನ್ನೂ ಜಗಜಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಕೊಳಗೇರಿ ಕುಲವೆತ್ತಿ, ಕೊಳೆತ ರಾಕ್ಷಸ ಬೀಜ ಬಿತ್ತಿ, ಫಸಲು ತೆಗೆಯಲು ತೋಳೆತ್ತಿ, ಘರ್ಜಿಸಿದರೆ ಬಂದೀತೇ... ನೀ ಬಿತ್ತದ... ಬೆಳೆ ತೆಗೆಯಲು ತಲೆಯೆತ್ತಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಸೋತರೂ... ಅದಿಕಾರದ ಕುರ್ಚಿ ಹತ್ತಿ..! ನಡೆಸಲಾಗದೆ.. ಪ್ರಜಾ ತತ್ವ ಮೇಲೆತ್ತಿ..! ಗೊತ್ತಿದ್ದೂ... ಅಂತ್ಯ ಕಟ್ಟಿಟ್ಟ ಬುತ್ತಿ, ಅಹಂಕಾರದಿ ಮೆರೆವ ಜಗಜಟ್ಟಿ..! ಮೀಸೆ ಮಣ್ಣಾಗದ ಜಗಜಟ್ಟಿ..! ಸೋತರೂ ಮೀಸೆ ಮಣ್ಣಾಗದ ಜಗಜಟ್ಟಿ..! ಗೊತ್ತಿದ್ದೂ... ಅಂತ್ಯ ಕಟ್ಟಿಟ್ಟ ಬುತ್ತಿ

ಅವನಿಗೆ ಈಗ ಅಷ್ಟೇ...!

ಅವನಿಗೆ ಈಗ ಅಷ್ಟೇ...! ಕಂಡಿರಲಿಲ್ಲ ಕನಸು ಅಂದುಕೊಂಡಿದ್ದು ಅಷ್ಟೇ... ರೊಚ್ಛಿಗೆದ್ದಾಗ ಮುನಿಸು ಬಾಲ್ಯ ಕಾಣಲಿಲ್ಲ ಅಷ್ಟೇ.. ಓದುವ ವಯಸ್ಸು ಪುಸ್ತಕದ ಹುಳು ಅಷ್ಟೇ... ದುಡಿಯುವ ಹುಮ್ಮಸ್ಸು ಸುಮ್ಮನಿರಲಿಲ್ಲ ಅಷ್ಟೇ.. ದಂಗಾಗಲಿಲ್ಲ ಬರಿ ಊರ ಜನರಷ್ಟೇ..! ಕಟ್ಟಿದಾಗ ಕೋಟಿ ಕೋಟಿ TAX ಈಗ ಅಷ್ಟೇ...! ಅವನಿಗೆ ಅದು ಬರಿ ಅಷ್ಟೇ..! ಬರೀ ಅಷ್ಟೇ.!

ಬಹುಮುಖ

ಬಹುಮುಖ ನೀನಿವತ್ತು ಜನ ನಾಯಕ ಸೇವೆಯೇ ನಿನ್ನ ಕಾಯಕ ಗೊತ್ತಿಲ್ಲ ನಿನಗಾವುದು ಕುಹಕ ಅದಕ್ಕೇ ನೀ ಹತ್ತೂರಿನ ಧನಿಕ ನಿನ್ನ ಸಾಧನೆಗೆ ನಾ ಭಾವುಕ ನಿನ್ನದೋ ಪ್ರತಿಭೆ ಬಹುಮುಖ ಗೊತ್ತಿಲ್ಲ ನೆನಪಾಯ್ತು ಈಗ್ಯಾಕ ಅದೆಷ್ಟು ನಕ್ಕಿದ್ದೆವು ಪಕ ಪಕ ಆಗ ನೀ ಬಾಲಕ ನಿನ್ನಮ್ಮ ಹೇಳುವಾಗ.. "ಅವನಿಗೆ ಚಡ್ಡಿ ಯಾಕ...? ಹೊಟ್ಟಿಗೆ ಹಿಟ್ಟಿಲ್ಲದಾಗ.. ಅವನಿಗೆ ಚಡ್ಡಿ ಯಾಕ..?" ಅವನಿಗೆ ಚಡ್ಡಿ ಯಾಕ..?