Posts

Showing posts from 2008

ನಾಡಿ ಮಿಡಿದವಳು

ಕೇಳಿದ್ದಳು ಕೆನ್ನೆ ಸವರಿ ಬೆಣ್ಣೆ ಪೆನ್ಸಿಲ್ಲು, ಹಿಡಿದಿದ್ದಳು ತೊಂಡೆಸೊಪ್ಪು ತಿಕ್ಕಿದ್ದ ಬರಹದ ಕಲ್ಲು, ಬಿಕ್ಕಿದ್ದಳು ಬೇಡವೆಂದರೇಕೆ ತಂದಿಟ್ಟೆ ಈಚಲು ಕೋಲು? ತಡವರಿಸಿದ್ದಳು ತಪ್ಪಿಲ್ಲದೆ ಉಕ್ತಲೇಖನ ಬರೆಯಲು, ಕಾದಿದ್ದಳು ಕೋಪದಿ ಶಾಲೆಯಿಂದೊರಬರಲು, ನೋಯಿಸಿದ್ದಳು ಮನದಿ ಮೌನ ಮರೆಯಾಗಲು, ಏಕೆಂದರೆ ಅವಳು ನನ್ನವಳು,ಹೃದಯದ ನಾಡಿ ಮಿಡಿದವಳು.

ಯಾರವಳು?

ಮಾಗಿಯ ಚಳಿಗೆ ಮಂಜಿನ ಮುಸುಕೆಳೆದು ಮನದ ಮಾತಿಗೆ ಸಿಗದೆ ಹೋದವಳ್ಯಾರು? ಚಿಗುರೊಡೆದ ಪ್ರೀತಿಗೆ ಆಸೆಯ ಕುಡಿಯಾಗಿ ಹೃದಯಕೆ ಸ್ಪಂದಿಸದವಳ್ಯಾರು? ಬೆಚ್ಚಗಿನ ಗೂಡಾಗಿ, ಮುತ್ತಿನ ಮಳೆಗರೆದು ನಡುಕ ನಿಲ್ಲಿಸದೆ ಹೋದವಳ್ಯಾರು? ಹೊದ್ದು ಮಲಗಿದ್ದ ಮುದ್ದು ಗುಮ್ಮನ ಬೆಚ್ಚಿಬೀಳಿಸಿ ನಿದ್ರೆ ಕದ್ದವಳ್ಯಾರು? ಇದನರಿತೂ, ಕಾರಣ ನಾನಲ್ಲವೆಂದು ಮುಗುಳ್ನಕ್ಕ ಮಿಂಚುಳ್ಳಿ ನೀನ್ಯಾರು...!?

ಎಲ್ಲಿ ತಪ್ಪಿದೆ?

ಧೀರನಿಗೆ ದಿಕ್ಕೆಟ್ಟು ದಾರಿ ಕಾಣದಾಗಿದೆ ಸಾಗರಕಿಳಿದ ಶೂರನಿಗೆ ಸ್ನಾಯು ಸೆಳೆದಾಗಿದೆ ವೀರನೆನ್ದರಚಿದವನಿಗೆ ವಿಪತ್ತು ಬಂದೆರಗಿದೆ ತಂಪೆರೆದ ತಾಯ ಮಡಿಲೋಳು ತಾಪ ಹೆಚ್ಚಿದೆ ಮದುವೆಯೆಂದಾಗ ಗೆಳೆಯರ ಬಳಗ ಬರಿದಾಗಿದೆ ಕೆಲಸದೊತ್ತದಡಿ ಮನಸು ಏನೆಲ್ಲಾ ಮರೆತಿದೆ ಅಕ್ಷರತಃ ಬೆಚ್ಚಿದೆ,ನಿದ್ರೆಯಿಂದೆದ್ದಾಗ ನಿನ್ನ ಅಪ್ಪಿದೆ. ಕೇಳುತಿರುವೆ ಗೆಳೆಯ ನಾನೀಗ ಎಲ್ಲಿ ತಪ್ಪಿದೆ?.

ಅವಳದೇ ಚಿಂತೆ

ಪ್ರೀತಿಸೋ ಹೃದಯ ಪ್ರೀತಿಗಾಗಿ ತುಡಿಯುತ್ತೆ ಅರಿತ ಹೃದಯ ಲೋಕ ಮರೆಯುತ್ತೆ? ತನ್ನಿಚ್ಚೆಯಂತೆ... ಮೆರೆಯುತ್ತೆ ಮೃದು ಭಾವದಿ ಮುದ್ದಿಸುತ್ತೆ, ಹೌದು ಅವಳಂತೆ! ಅದರದು ಮತ್ತೊಬ್ಬರಿಗೆ ಬರಿ ಅಂತೆ ಕಂತೆ. ಲೋಕವೇ ಹೀಗಂತೆ. ನಟಿಸು ನೀ ಸುಮ್ಮನೆ ಅವಳ ಮರೆತಂತೆ. ಚಿತೆಗೇರಿಸುವ ಮೊದಲು ಅವಳ ಚಿಂತೆ.

'ಕಾದು ಕುಳಿತವರು'

ಎಷ್ಟು ಮೂಢರು ನಮ್ಮವರು ಕೂತಲ್ಲೇ ಕೂರುವರು ಬಸ್ ಬರುವವರೆಗೂ ಬಿಸಿಲಿಗೆ ತಲೆಕೊಟ್ಟು ಮೈ ಕರ್ರಗಾಗುವವರೆಗೂ , ಅನಿವಾರ್ಯ ಎನ್ನುವರು ತಂಗುದಾಣ ಕಟ್ಟುವರೆಗೂ, ರಸ್ತೆಗೆ ಟಾರ್ ಹಾಕುವವರೆಗೂ , ಎಷ್ಟು ಮೂಢರು ನಮ್ಮವರು ಕೂತಲ್ಲೇ ಕೂರುವರು ಬಸ್ ಬರುವವರೆಗೂ. ಅದೆಷ್ಟು ಉಸಿರು ಕಟ್ಟುವರು ಧೂಳೆದ್ದ ಮೂಗು ಅಕ್ಕುಗಟ್ಟುವವರೆಗೂ ನರಳುವರು ಮತ್ತೊಂದು ರೋಗ ಬೆನ್ನತ್ತುವವರೆಗೂ ಸಂತೆ ಕಾಸು ಡಾಕ್ಟರ್ ಕಂತೆ ಸೇರುವವರೆಗೂ ಎಷ್ಟು ಮೂಢರು ನಮ್ಮವರು ಕೂತಲ್ಲೇ ಕೂರುವರು ಬಸ್ ಬರುವವರೆಗೂ ಧಡ ಧಡನೆ ನುಗ್ಗುವರು ಸೀಟು ಹಿಡಿಯುವವರೆಗೂ ಸಿಗದಾಗ ನೂಕಾಡಿ ಬಸ್ಸಿನ ಮೇಲೇರುವವರೆಗೂ ಸೇದುವರು ಬೀಡಿ ಗೊರಲತ್ತಿ ಕೆಮ್ಮುವವರೆಗೂ ಹಿಡಿದ ಮೂಗು ಮಿಸುಕಾಡಿ ತಲೆ ಸುತ್ತುವವರೆಗೂ ಕಾದಾಡುವರು ಕಂಡಕ್ಟರ್ ಜೋಡಿ ಬಸ್ ಹೊರಡುವವರೆಗೂ ಗುಂಡಿಗಳಲ್ಲಿ ಚಾಲಕ ರಸ್ತೆ ಹುಡುಕುವವರೆಗೂ ನರಳುವರು ಅವರಿವರ ಕಾಲಡಿ ಊರು ತಲುಪುವವರೆಗೂ ಎಷ್ಟು ಮೂಢರು ನಮ್ಮವರು..!!! ಇದನ್ನರಿತವರು ಕೂತಲ್ಲೇ ಕೂರುವರು ಮತ್ತೆ ಚುನಾವಣೆ ಬರುವವರೆಗೂ.

'ಪಟಾಕಿ'

ಕಂಡಿದ್ದೆ, ಆ ರಾತ್ರಿ ಸಂಭ್ರಮಿಸಿದ ನನ್ನ ಗೆಳೆಯನ ಅಂದುಕೊಂಡೆ, ನಾನೂ ಸಿಡಿಸಬೇಕು ಪಟಾಕೀನ ಅತ್ತು ಕಾಡಿದೆ ಅಂದೇ ನಮ್ಮಪ್ಪನ ತುಸು ಹುಚ್ಚನಂತೆ, ಬಡಿದು ಸಂಭ್ರಮಿಸಿದ್ದೆ ಗುಂಡುಕಲ್ಲನ್ನ... ನೊಂದ ಅಮ್ಮ ನೀಡಿದ್ದಳು ಮುತ್ತಿನ ಸಾಂತ್ವನ ಹೇಗೆ ಕೊಡಿಸಿಯಾನು ಅಪ್ಪ ಪಟಾಕೀನ ? ಆಗ ಕಿತ್ತು ತಿನ್ನುತ್ತಿತ್ತು ಪಾಪಿ ಬಡತನ.. ಇನ್ನೂ ಮರೆತಿಲ್ಲ, ನಮ್ಮನ್ನೋದಿಸಲು ಅಪ್ಪ ಪಟ್ಟ ಶ್ರಮಾನ ಪಡೆಯುತ್ತಿರುವಾಗ ಅವನೆಟ್ಟ ಗಿಡದ ಫಲಾನ ಈಗ ಮನಸ್ಸಿಲ್ಲ ಏಕೋ ಹೊಡೆಯಲು ಪಟಾಕೀನ ಜೊತೆಗೆ, ಏಕೆ ಹಾಳುಮಾಡಬೇಕು ನಮ್ಮ ಸ್ವಚ್ಚಂದ ಪರಿಸರಾನ.

"ಮುತ್ತು"

"ಮುತ್ತು" ನಂಗೊತ್ತು ಅವಳು ಕೊಡೋಲ್ಲ ಮುತ್ತು ಕೊಟ್ಟರೆ ಬಿತ್ತು ಅವಳ ನತ್ತು ನನ್ನ ಜೇಬಲ್ಲಿ ಇತ್ತು ಅದ್ಹೇಗೆ ಬಂತು? ಹೇಳಬೇಡ ಅಂದಿದ್ಲು ಅವತ್ತು! ಹೇಗೋ ಪ್ರೀತಿ ಬೆಸೆದಿತ್ತು ಏಳು ಹೆಜ್ಜೆ ತುಳಿದಾಯ್ತು ಆಮೇಲೆ ನೆನಪಾಯ್ತು ಅಣ್ಣನ ನುಡಿಮುತ್ತು ಛೇ ನಾ ಇನ್ನೂ ಓದಬೇಕಿತ್ತು..!!!!!!!!!