"ನೆಮ್ಮದಿಯ ನೆಲೆ"

ಕಡ ತಂದು ಖಾರ ಅರೆದ ಕೈ
ಕರುಳ ಕುಡಿಗೆ ತುತ್ತು ನೀಡಿತ್ತು,
ಕೂಲಿ ಮಾಡಿ ಕಾಸು ತಂದ ಮೈ
ಮಾಗಿ ಮರುಗಿತ್ತು,
ಕಡು ಬಡತನಕೆ ಆಸರೆ
ಅಂದು ದೊರೆತಿತ್ತು, ಅದು..,
ಕಷ್ಟವನರಿತ ಮಕ್ಕಳ ಭವಿತವ್ಯಕ್ಕೊಂದು
ರೂಪು ನೀಡಿತ್ತು,
ಕಾಸು ಕಂಡ ಜೀವ ಈಗ ತೊದಲಿತ್ತು,
ಬಡತನದಲ್ಲೇ
ನೆಮ್ಮದಿ
ನೆಲೆಸಿತ್ತು.
ಕಾರಣ
ಕುರುಡು ಕಾಂಚಾಣ ಕುಣಿದಿತ್ತು.

Comments

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು