ಯಾರವಳು?

ಮಾಗಿಯ ಚಳಿಗೆ ಮಂಜಿನ ಮುಸುಕೆಳೆದು
ಮನದ ಮಾತಿಗೆ ಸಿಗದೆ ಹೋದವಳ್ಯಾರು?
ಚಿಗುರೊಡೆದ ಪ್ರೀತಿಗೆ ಆಸೆಯ ಕುಡಿಯಾಗಿ
ಹೃದಯಕೆ ಸ್ಪಂದಿಸದವಳ್ಯಾರು?
ಬೆಚ್ಚಗಿನ ಗೂಡಾಗಿ, ಮುತ್ತಿನ ಮಳೆಗರೆದು
ನಡುಕ ನಿಲ್ಲಿಸದೆ ಹೋದವಳ್ಯಾರು?
ಹೊದ್ದು ಮಲಗಿದ್ದ ಮುದ್ದು ಗುಮ್ಮನ ಬೆಚ್ಚಿಬೀಳಿಸಿ
ನಿದ್ರೆ ಕದ್ದವಳ್ಯಾರು?
ಇದನರಿತೂ,
ಕಾರಣ ನಾನಲ್ಲವೆಂದು
ಮುಗುಳ್ನಕ್ಕ ಮಿಂಚುಳ್ಳಿ ನೀನ್ಯಾರು...!?

Comments

ಅವಿ said…
yaranna avalu sikkiddla?

Popular posts from this blog

ಮನದ ಮುಂಜಾವು