ನಾಡಿ ಮಿಡಿದವಳು

ಕೇಳಿದ್ದಳು
ಕೆನ್ನೆ ಸವರಿ ಬೆಣ್ಣೆ ಪೆನ್ಸಿಲ್ಲು,
ಹಿಡಿದಿದ್ದಳು
ತೊಂಡೆಸೊಪ್ಪು ತಿಕ್ಕಿದ್ದ ಬರಹದ ಕಲ್ಲು,
ಬಿಕ್ಕಿದ್ದಳು
ಬೇಡವೆಂದರೇಕೆ ತಂದಿಟ್ಟೆ ಈಚಲು ಕೋಲು?
ತಡವರಿಸಿದ್ದಳು
ತಪ್ಪಿಲ್ಲದೆ ಉಕ್ತಲೇಖನ ಬರೆಯಲು,
ಕಾದಿದ್ದಳು
ಕೋಪದಿ ಶಾಲೆಯಿಂದೊರಬರಲು,
ನೋಯಿಸಿದ್ದಳು
ಮನದಿ ಮೌನ ಮರೆಯಾಗಲು,
ಏಕೆಂದರೆ ಅವಳು
ನನ್ನವಳು,ಹೃದಯದ ನಾಡಿ ಮಿಡಿದವಳು.

Comments

It seems Sanna Soma has finnally been fallen in love with Minchulli....Wah Wah. Thanks to the girl who made You, at least write poetry, man.
soma yakappa ninu bareyoke inspire mado hudugi innu siklilva?

Popular posts from this blog

ಮನದ ಮುಂಜಾವು