'ಪಟಾಕಿ'

ಕಂಡಿದ್ದೆ,
ಆ ರಾತ್ರಿ ಸಂಭ್ರಮಿಸಿದ ನನ್ನ ಗೆಳೆಯನ
ಅಂದುಕೊಂಡೆ,
ನಾನೂ ಸಿಡಿಸಬೇಕು ಪಟಾಕೀನ
ಅತ್ತು ಕಾಡಿದೆ ಅಂದೇ ನಮ್ಮಪ್ಪನ
ತುಸು ಹುಚ್ಚನಂತೆ,
ಬಡಿದು ಸಂಭ್ರಮಿಸಿದ್ದೆ ಗುಂಡುಕಲ್ಲನ್ನ...

ನೊಂದ ಅಮ್ಮ ನೀಡಿದ್ದಳು ಮುತ್ತಿನ ಸಾಂತ್ವನ
ಹೇಗೆ ಕೊಡಿಸಿಯಾನು ಅಪ್ಪ ಪಟಾಕೀನ ?
ಆಗ ಕಿತ್ತು ತಿನ್ನುತ್ತಿತ್ತು ಪಾಪಿ ಬಡತನ..

ಇನ್ನೂ ಮರೆತಿಲ್ಲ,
ನಮ್ಮನ್ನೋದಿಸಲು ಅಪ್ಪ ಪಟ್ಟ ಶ್ರಮಾನ
ಪಡೆಯುತ್ತಿರುವಾಗ ಅವನೆಟ್ಟ ಗಿಡದ ಫಲಾನ
ಈಗ ಮನಸ್ಸಿಲ್ಲ ಏಕೋ ಹೊಡೆಯಲು ಪಟಾಕೀನ
ಜೊತೆಗೆ,
ಏಕೆ ಹಾಳುಮಾಡಬೇಕು ನಮ್ಮ ಸ್ವಚ್ಚಂದ ಪರಿಸರಾನ.

Comments

Popular posts from this blog

ನಾಡಿ ಮಿಡಿದವಳು

ಜಗದೊಳಗೆ ಮರೆಯಾಗು!

ಅವಳದೇ ಚಿಂತೆ