'ಕಾದು ಕುಳಿತವರು'

ಎಷ್ಟು ಮೂಢರು ನಮ್ಮವರು
ಕೂತಲ್ಲೇ ಕೂರುವರು ಬಸ್ ಬರುವವರೆಗೂ
ಬಿಸಿಲಿಗೆ ತಲೆಕೊಟ್ಟು ಮೈ ಕರ್ರಗಾಗುವವರೆಗೂ,
ಅನಿವಾರ್ಯ ಎನ್ನುವರು
ತಂಗುದಾಣ ಕಟ್ಟುವರೆಗೂ, ರಸ್ತೆಗೆ ಟಾರ್ ಹಾಕುವವರೆಗೂ,
ಎಷ್ಟು ಮೂಢರು ನಮ್ಮವರು
ಕೂತಲ್ಲೇ ಕೂರುವರು ಬಸ್ ಬರುವವರೆಗೂ.

ಅದೆಷ್ಟು ಉಸಿರು ಕಟ್ಟುವರು
ಧೂಳೆದ್ದ ಮೂಗು ಅಕ್ಕುಗಟ್ಟುವವರೆಗೂ
ನರಳುವರು ಮತ್ತೊಂದು ರೋಗ ಬೆನ್ನತ್ತುವವರೆಗೂ
ಸಂತೆ ಕಾಸು ಡಾಕ್ಟರ್ ಕಂತೆ ಸೇರುವವರೆಗೂ
ಎಷ್ಟು ಮೂಢರು ನಮ್ಮವರು
ಕೂತಲ್ಲೇ ಕೂರುವರು ಬಸ್ ಬರುವವರೆಗೂ

ಧಡ ಧಡನೆ ನುಗ್ಗುವರು ಸೀಟು ಹಿಡಿಯುವವರೆಗೂ
ಸಿಗದಾಗ ನೂಕಾಡಿ ಬಸ್ಸಿನ ಮೇಲೇರುವವರೆಗೂ
ಸೇದುವರು ಬೀಡಿ ಗೊರಲತ್ತಿ ಕೆಮ್ಮುವವರೆಗೂ
ಹಿಡಿದ ಮೂಗು ಮಿಸುಕಾಡಿ ತಲೆ ಸುತ್ತುವವರೆಗೂ
ಕಾದಾಡುವರು ಕಂಡಕ್ಟರ್ ಜೋಡಿ ಬಸ್ ಹೊರಡುವವರೆಗೂ
ಗುಂಡಿಗಳಲ್ಲಿ ಚಾಲಕ ರಸ್ತೆ ಹುಡುಕುವವರೆಗೂ
ನರಳುವರು ಅವರಿವರ ಕಾಲಡಿ ಊರು ತಲುಪುವವರೆಗೂ

ಎಷ್ಟು ಮೂಢರು ನಮ್ಮವರು..!!! ಇದನ್ನರಿತವರು
ಕೂತಲ್ಲೇ ಕೂರುವರು ಮತ್ತೆ ಚುನಾವಣೆ ಬರುವವರೆಗೂ.

Comments

No doubt that Sanna Soma has turned out to be a full-fledged poet!! One more poet is born. Soma, though the peoms seem simple it is nice that they are good to this day. All the poems are nice. Keep doing this..Good....

Popular posts from this blog

ಮನದ ಮುಂಜಾವು