ನಿಲುವು ಇಲ್ಲದ ನಾಯಕನ, ನಿಲುವಂಗಿ ನಂಬಿ.. ನಿಂತಿರುವ ಬೆದರು ಬೊಂಬೆಗೆ, ನಿಜವಾಗಿಯೂ ಜೀವ ಹಿಂಡಿ.. ನಿಗಿ ನಿಗಿ ಕೆಂಡ ಕಾರುವ ಮೊದಲು, ನಿನ್ನ ನೀ ಕಂಡುಕೊ.. ನೀ ನಿನ್ನ ಮರೆತು, ಕಾಣದ ಜಗದೊಳಗೆ ಮರೆಯಾಗುವ ಮೊದಲು, ಕರೆದರೂ ಬಾರದ ಬದುಕಾಗುವ ಮೊದಲು.
ಪ್ರೀತಿಸೋ ಹೃದಯ ಪ್ರೀತಿಗಾಗಿ ತುಡಿಯುತ್ತೆ ಅರಿತ ಹೃದಯ ಲೋಕ ಮರೆಯುತ್ತೆ? ತನ್ನಿಚ್ಚೆಯಂತೆ... ಮೆರೆಯುತ್ತೆ ಮೃದು ಭಾವದಿ ಮುದ್ದಿಸುತ್ತೆ, ಹೌದು ಅವಳಂತೆ! ಅದರದು ಮತ್ತೊಬ್ಬರಿಗೆ ಬರಿ ಅಂತೆ ಕಂತೆ. ಲೋಕವೇ ಹೀಗಂತೆ. ನಟಿಸು ನೀ ಸುಮ್ಮನೆ ಅವಳ ಮರೆತಂತೆ. ಚಿತೆಗೇರಿಸುವ ಮೊದಲು ಅವಳ ಚಿಂತೆ.
Comments