ಸಾವು ಸತ್ತಾಗ ಕತ್ತಲ ದಾರಿಯಲಿ ಬೆತ್ತಲಾಗಿಹ ಸತ್ಯ ನಿತ್ಯವೂ ಕಾಣಿಸದ ಮೃತ್ಯುವಿನ ತರಹ ಆದರೂ ಅದೆಷ್ಟು ನೂಕು ನುಗ್ಗಲು ಬದುಕಿನ ದಾರಿ ಕಾಣದೆ ಬಂದವರು ಅಳುತಲಿ ಹೋಗುವಾಗ ಅಳಿಸುತಲಿ ಕಾಡಿದ ಮನಗಳ ನೋಯಿಸುತ ಕಲ್ಪನೆಯ ಉಸುರಿನಲಿ ಶಾಂತಿ ಪದಕ್ಕೀಗ ಅರ್ಥವೆಲ್ಲಿ ..? ಪಾಪ ಪುಣ್ಯಗಳ ಲೆಕ್ಕವೆಲ್ಲಿ ..? ವಿಜೃಂಭಿಸುತ್ತಿರಲು ಆವರಿಸಿದ ಮೃಗ ಆತ್ಮಸಾಕ್ಷಿಯ ಪಕ್ಕದಲಿ ಅರ್ಥ ಕಾಣದ ರೊಕ್ಕವೆಲ್ಲಿ ಅಂಥವರಿಗೇ ಕಾಲವೆಂದು ಹಿಡಿಶಾಪವಿತ್ತಾಗ ಮೆರಿದಿಹರಿಲ್ಲಿ ಕಡುಭ್ರಷ್ಟರಾಗಿ ಜಗದಲಿ ಸಾವು ಸತ್ತಾಗ ಮನದಲಿ ನಾವು ಸತ್ತಾಗ ನಾವು ಸತ್ತಾಗ
Posts
Showing posts from 2013
- Get link
- X
- Other Apps
ನನಗರ್ಧ ಮಾತ್ರ..! ಅವಳಿಗಾಗಿ ಅರ್ಧಘಂಟೆ ಕಾದೆ ಅವಳು ಕಾಡಿದ ದಿನದಂದೇ ಅವಳಿಗಾಗಿ ಅರ್ಧ ದಿನ ದೂಡಿದೆ ಅವಳು ಕಾಣಲು ಬರುವಳೆಂದೇ ಅವಳಿಗಾಗಿ ಅರ್ಧ ಬಾಗಿಲು ತೆರೆದೆ ಅವಳ ಕಾಲ್ಗೆಜ್ಜೆ ಸದ್ದಿಗೆಂದೇ ಅವಳಿಗಾಗಿ ಅರ್ಧ ಶಪಿಸಿದೆ ಅವಳ ಪ್ರತಿಕ್ಷಣ ಬಿಟ್ಟಿರಬಾರದೆಂದೆ ಅವಳಿಗಾಗಿ ಅರ್ಧ ಜೀವನ ಮುಡುಪಿಟ್ಟೆ ಅವಳು ನನ್ನ ಅರ್ಧಾಂಗಿ ಎಂದೇ ಅವಳಿಗಾಗಿ ಅರ್ಧ ಅವಿತೆ ಅವಳು ಮಿಂಚಂತೆ ಸರಿದ ಮೊಡದಿಂದೆ ಅದೇಕೆ ಪೂರ್ತಿನೊಂದೆ ಕಾರಣ ತಿಳಿಯದೆ ಅವಳು ನನಗರ್ಧ ಮಾತ್ರವೆಂದೆ ನನ್ನ ಬದುಕಲಿ ನನಗರ್ಧ ಮಾತ್ರವೆಂದೆ
- Get link
- X
- Other Apps
ಸಾಯಲೆಂದೇ ಭೂಮಿಗೆ ಬಂದವರು ಸಾಯಲೆಂದೇ ಭೂಮಿಗೆ ಬಂದವರು ಸಾವು ಕಟ್ಟಿಕೊಂಡು ನೊಂದರು ಬದುಕಲಿ ಭ್ರಮಿಸಿ ನಿಂದವರು ಭಂದರೆಂದು ಬೈಸಿಕೊಂಡರು ಕಟ್ಟುಪಾಡುಗಳಿಗೆ ಹೆದರಿದವರು ಹುಟ್ಟಿನ ಮರ್ಮ ಅರಿಯದಾದರು ಮತಿಸಿ ಮನಶಾಂತಿ ಕಂಡವರು ಮತ್ತೊಬ್ಬರ ಮನಕೆ ನಿಲುಕದಾದರು ಸಮ್ಮತಿಸಿ ಸಂಭೋಗಿಸಿದವರು ಸದ್ಭಾವನೆಯೇ ಪ್ರೀತಿ ಎಂದರು ಇದ ಕಾರಣ ಅರಿಯದವರು ತಲೆಕೆಡಿಸಿಕೊಳ್ಳದೆ ಸುಮ್ಮನಾದರು ಸಾವಲ್ಲಿ ಸುಮ್ಮನಾದರು.
Manada Minchu
- Get link
- X
- Other Apps
ಮನದ ಮಿಂಚು..! ಬದುಕುವ ಭರವಸೆ ಕೈ ಚೆಲ್ಲಿ ಕುಳಿತು... ಬಾರದವಳ ಬಿನ್ನಾಣಕ್ಕೆ ಹಪಹಪಿಸಿ ನೊಂದು... ಬರಿದಾದ ಭಾವನೆಗೆ ಬಣ್ಣ ತುಂಬಲೆಂದು... ಕುಳಿತಿತ್ತ್ಹೊಂದು ಜೀವ ಸೋಲೊಪ್ಪಿಕೊಂಡು. ಬಿಡದ ವ್ಯಾಕುಲಕೆ ಬಡಿದ ಮಿಂಚೊಂದು ಸಾವರಿಸಿತು ಮನಕೆ ಮುನ್ನುಗ್ಗು ಎಂದೆಂದೂ. ಸಾವಿರ ಮೆಟ್ಟಿಲು ಶ್ರಮದ ಸೊತ್ತೆಂದು ಅರಿತ ಹೃದಯ ಸಂಭ್ರಮಿಸಿತು ಎಂದಿನಂತಿಂದು ಜೊತೆಗೆ... ಕಾಡಿದವಳು ಕೈ ಹಿಡಿದಳು ಅದೇ ಮಿಂಚಂತೆ ಬಂದು..! ಅದೇ ಮಿಂಚಂತೆ ಬಂದು..!