ಸಾವು ಸತ್ತಾಗ
ಕತ್ತಲ
ದಾರಿಯಲಿ ಬೆತ್ತಲಾಗಿಹ ಸತ್ಯ
ನಿತ್ಯವೂ
ಕಾಣಿಸದ ಮೃತ್ಯುವಿನ ತರಹ
ಆದರೂ
ಅದೆಷ್ಟು ನೂಕು ನುಗ್ಗಲು
ಬದುಕಿನ
ದಾರಿ ಕಾಣದೆ
ಬಂದವರು
ಅಳುತಲಿ
ಹೋಗುವಾಗ
ಅಳಿಸುತಲಿ
ಕಾಡಿದ
ಮನಗಳ ನೋಯಿಸುತ
ಕಲ್ಪನೆಯ
ಉಸುರಿನಲಿ
ಶಾಂತಿ
ಪದಕ್ಕೀಗ ಅರ್ಥವೆಲ್ಲಿ..?
ಪಾಪ
ಪುಣ್ಯಗಳ ಲೆಕ್ಕವೆಲ್ಲಿ..?
ವಿಜೃಂಭಿಸುತ್ತಿರಲು
ಆವರಿಸಿದ ಮೃಗ
ಆತ್ಮಸಾಕ್ಷಿಯ
ಪಕ್ಕದಲಿ
ಅರ್ಥ
ಕಾಣದ ರೊಕ್ಕವೆಲ್ಲಿ
ಅಂಥವರಿಗೇ
ಕಾಲವೆಂದು ಹಿಡಿಶಾಪವಿತ್ತಾಗ
ಮೆರಿದಿಹರಿಲ್ಲಿ
ಕಡುಭ್ರಷ್ಟರಾಗಿ ಜಗದಲಿ
ಸಾವು
ಸತ್ತಾಗ
ಮನದಲಿ
ನಾವು ಸತ್ತಾಗ
ನಾವು
ಸತ್ತಾಗ
Comments