Manada Minchu
ಮನದ ಮಿಂಚು..!
ಬದುಕುವ ಭರವಸೆಕೈ ಚೆಲ್ಲಿ ಕುಳಿತು...
ಬಾರದವಳ ಬಿನ್ನಾಣಕ್ಕೆ
ಹಪಹಪಿಸಿ ನೊಂದು...
ಬರಿದಾದ ಭಾವನೆಗೆ
ಬಣ್ಣ ತುಂಬಲೆಂದು...
ಕುಳಿತಿತ್ತ್ಹೊಂದು ಜೀವ
ಸೋಲೊಪ್ಪಿಕೊಂಡು.
ಬಿಡದ ವ್ಯಾಕುಲಕೆ
ಬಡಿದ ಮಿಂಚೊಂದು
ಸಾವರಿಸಿತು ಮನಕೆ
ಮುನ್ನುಗ್ಗು ಎಂದೆಂದೂ.
ಸಾವಿರ ಮೆಟ್ಟಿಲು
ಶ್ರಮದ ಸೊತ್ತೆಂದು
ಅರಿತ ಹೃದಯ
ಸಂಭ್ರಮಿಸಿತು ಎಂದಿನಂತಿಂದು
ಜೊತೆಗೆ...
ಕಾಡಿದವಳು ಕೈ ಹಿಡಿದಳು
ಅದೇ ಮಿಂಚಂತೆ ಬಂದು..!
ಅದೇ ಮಿಂಚಂತೆ ಬಂದು..!
Comments