ನನಗರ್ಧ ಮಾತ್ರ..!
ಅವಳಿಗಾಗಿ ಅರ್ಧಘಂಟೆ ಕಾದೆ
ಅವಳು ಕಾಡಿದ ದಿನದಂದೇ
ಅವಳಿಗಾಗಿ ಅರ್ಧ ದಿನ ದೂಡಿದೆ
ಅವಳು ಕಾಣಲು ಬರುವಳೆಂದೇ
ಅವಳಿಗಾಗಿ ಅರ್ಧ ಬಾಗಿಲು ತೆರೆದೆ
ಅವಳ ಕಾಲ್ಗೆಜ್ಜೆ ಸದ್ದಿಗೆಂದೇ
ಅವಳಿಗಾಗಿ ಅರ್ಧ ಶಪಿಸಿದೆ
ಅವಳ ಪ್ರತಿಕ್ಷಣ ಬಿಟ್ಟಿರಬಾರದೆಂದೆ
ಅವಳಿಗಾಗಿ ಅರ್ಧ ಜೀವನ ಮುಡುಪಿಟ್ಟೆ
ಅವಳು ನನ್ನ ಅರ್ಧಾಂಗಿ ಎಂದೇ
ಅವಳಿಗಾಗಿ ಅರ್ಧ ಅವಿತೆ
ಅವಳು ಮಿಂಚಂತೆ ಸರಿದ ಮೊಡದಿಂದೆ
ಅದೇಕೆ ಪೂರ್ತಿನೊಂದೆ
ಕಾರಣ ತಿಳಿಯದೆ
ಅವಳು ನನಗರ್ಧ ಮಾತ್ರವೆಂದೆ
ನನ್ನ ಬದುಕಲಿ
ನನಗರ್ಧ ಮಾತ್ರವೆಂದೆ
Comments