ಡೂಪ್ಲಿಕೇಟ್ ಚಂದ್ರ - ಚೀನಾಗೆ ಬಂದ
ಡೂಪ್ಲಿಕೇಟ್ ಗೆ ಇನ್ನೊಂದು ಹೆಸ್ರೇ ಚೀನಾ.. ಅಣ್ಣ ಇದು ಚೀನಾ ಮಾಡ್ಲಾ ಅಂತ ಕೇಳೋಷ್ಟು ಮಟ್ಟಿಗೆ ಕುಖ್ಯಾತಿ. ಈಗ ಈ ಚೀನಾ ಡೂಪ್ಲಿಕೇಟ್ ಚಂದ್ರ ನನ್ನೇ ಸೃಷ್ಟಿ ಮಾಡಿದೆ. ಭೂಮಿ ಮೇಲೆ ಚೈನಾ ಒಂದು ಅದ್ಭುತ ಚಂದ್ರನನ್ನ ಸೃಷ್ಟಿಸಿದೆ. ಇದೊಂದು ಕೃತಕ ಚಂದ್ರ. ಸಂಶೋಧನೆಗೆಂದು ಪೂರ್ವ ಜಾನ್ಸು ನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಪ್ರಖರ ಅಯಸ್ಕಾತಿಯ ಪ್ರಕ್ರಿಯೆ ಅಂದ್ರೆ ಪವರ್ ಫುಲ್ ಮಗ್ನೆಟಿಕ್ ಫೀಲ್ಡ್ ಮುಖಾಂತರ ಭೂಮಿಯ ಗುರುತ್ವಾಕರ್ಷಣೆ ಕಡಿಮೆ ಮಾಡುವ ಬಹು ದೊಡ್ಡ ಸಾಹಸಕ್ಕೆ ಅದು ಕೈ ಹಾಕಿದೆ. ನಿಜ ಹೇಳ್ಬೇಕು ಅಂದ್ರೆ, ನಮ್ಮ್ ಚಂದ್ರನ ಮೇಲೆ 1/6 ರಷ್ಟು ಗುರುತ್ವಾಕರ್ಷಣೆ ಬಲ ಇದೆ. ಇಲ್ಲೂ ಸಂಶೋಧನೆ ಮೂಲಕ ಗುರುತ್ವಕರ್ಷಕ್ಬಲವನ್ನ 1/6 ಆರನೇ ಒಂದದರಷ್ಟುಕ್ಕೆ ಇಳಿಸಲಾಗ್ತಿದೆ. ಮತ್ತೆ ಚಂದ್ರನ ಮೇಲಮೈ ನಲ್ಲಿರುವಂತೆ ಧೂಳು ಮತ್ತು ಕಲ್ಲು ಬಂಡೆಗಳನ್ನ ಇದರ ಪಡಸಾಲೆಯಲ್ಲಿ ಅಂದ್ರೆ ಒಂದು ರೂಮು ಅಥವಾ ಕೋಣೆ ಅಂತಾನೂ ಕರೀಬಹುದು ಅಲ್ಲಿ ನಿರ್ಮಿಸಲಾಗಿದೆ. ಅಲ್ಲಿ ಹೋದ್ರೆ ಪಕ್ಕಾ ಚಂದ್ರ ನೆ ಮೇಲೆ ಇದ್ದೀವಿ ಎನ್ನುವಂತಹ ಅನುಭವ ಆಗ್ಬೇಕು ಆ ರೀತಿ ತಯಾರು ಮಾಡಿದೆ. ಸಂಶೋಧಕರ ಪ್ರಕಾರ 2000 ನೇ ಇಸವಿಯಿಂದ ಭೌತಿಕ ಅಧ್ಯಯನ ಅಂದ್ರೆ ಫಿಸಿಕ್ಸ್ ಎಕ್ಸ್ಪ್ರೆರಿಮೆಂಟ್ ನಿಂದ ಪ್ರೇರಣೆಗೊಂಡಿದ್ದರಂತೆ. ಮಂಚೆಸ್ಟರ್ ಯೂನಿವರ್ಸಿಟಿ ಯ ಭೌತ ವಿಜ್ಞಾನಿ ಅಡ್ರೆ ಆಯಸ್ಕಾತ ಬಳಸಿ.. ಗುರುತ್ವಆಕರ್ಷಣೆ ಬಲ ಕುಗ್ಗಿಸಿ ಕಪ್ಪೆಯೊಂದನ್ನ ತೆಲಿಸುವ ಪ್ರಯತ್ನ ಮಾಡಿದ್ರಂತೆ. ಈಗ ಇದು ಗಗನ ಯಾನಿಗಳಿಗೆ ತರಬೇತಿ ನೀಡಲು ಮತ್ತು ಚಂದ್ರನ ಮೇಲೆ ರೋವರಗಳ ಚಲನೆಯ ಪರೀಕ್ಷಿಸಲು ಉದ್ದೇಶಿಸಲಾಗಿದೆ.
Comments