ಭುವಿಗೆ ಭಾರ..!

 ಬೇಡದ ಮನಸಿಗೆ ಒಲ್ಲದ ದಾಸನಾಗಿ

ನಿತ್ಯವೂ ನೊಂದ ಬೆಲ್ಲದ ಕಸವಾಗಿ

ಅದುಮಿಟ್ಟ ನೋವು ಒತ್ತರಿಸಿ ಚಿಗುರಾಗಿ

ಬಂದ ಕಾಸಿಗೆ ಕನಸು ಕುರುಡಾಗಿ 

ಬೆವರು ಹರಿಸಿ ದುಡಿದು ಬೆಂಡಾಗಿ

ಸಾಗಿದ ಬದುಕು...

ಅಂತ್ಯಕ್ಕೆ ಮುಂದಾಗಿ...ಛೇ!


ಅಕ್ಕರೆಯ ಮಗು ನೆನಪಾಗಿ 

ಮುತ್ತಿರಿಸಿ ಮಗುವಾಗಿ

ಬೇಡಲು ಬೇಕೆನಗೆ ಚೈತನ್ಯ ವರವಾಗಿ


ಮುಸುಕಿದ ದಾರಿಯೊಳು... ಬಾಳು ಮಬ್ಬಾಗಿ

ಕರಗುವ ಮುನ್ನ... ಮನಸು ಕುಬ್ಜ್ಆಗಿ

ಹೋಗುವ ಮುನ್ನ... ಭುವಿಗೆ ಭಾರವಾಗಿ

ಸುಮ್ಮನೆ...

ಸಾಧಿಸು ಸಣ್ಣ ಕಣವಾಗಿ

ಹೋಗುವ ಮುನ್ನ... ಭುವಿಗೆ ಭಾರವಾಗಿ

Comments

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು