ಪಿಕ್ಚರ್ ಟಿಕೆಟ್ಗಿಂತ ಪಾಪ್ ಕರ್ನ್ ರೇಟ್ ಜಾಸ್ತಿ ಯಾಕೆ?

 ಮೂಗಿಗಿಂತ ಮೂಗುತಿ ಭಾರ ಅನ್ನೋಹಾಗೆ... ಪಿಕ್ಚರ್ ಗಿಂತ ಪಾಪ್ ಕರ್ನ್ ರೇಟ್ ಜಾಸ್ತಿ ಯಾಕೆ?... ಮಾಲ್ ಗಳಲ್ಲಿ ಪಿಕ್ಚರ್ ನೋಡೋಕ್ ಹೋಗೋರಿಗೆ ಈ ಪ್ರಶ್ನೆ ಬಂದೇ ಬಂದಿರುತ್ತೆ. ರೀಸನ್ is ಸೊ ಸಿಂಪಲ್. ಮೂವಿ ಟಿಕೆಟ್ ರೇಟ್ ಜಾಸ್ತಿ ಆದ್ರೆ ಥೇಟರ್ ಗೆ ಬರೋರ್ ಸಂಖ್ಯೆ ಕಡಿಮೆ ಆಗುತ್ತೆ. ಅದ್ಕೆ ಪಾಪ್ ಕಾರ್ನ್ ರೇಟ್ ಜಾಸ್ತಿ ಅನ್ನಬಹುದು. ಆದ್ರೆ ಅದಲ್ಲ...  ಮೇಜರ್ ರೀಸನ್ ಬೇರೆ ಇದೆ. ಅದೇ ಮಾಲ್ ಗಳ ಬಿಸಿನೆಸ್ ಟೆಕ್ನಿಕ್.

ಮೂವಿ ಟಿಕೆಟ್ ಕಲೆಕ್ಷನ್ ನಿಂದ ಬರೋ ಹಣದಲ್ಲಿ ಇಂತಿಷ್ಟು ಪರ್ಸೆಂಟ್  ಪ್ರೊಡಕ್ಷನ್ ಹೌಸ್ ಗೆ ಮಾಲ್ ನವರು ಕೊಡಬೇಕು.  ಪಿವಿಆರ್ ಅಥವಾ ಇನ್ನೊಕ್ಸ್ ನಂತ ಮಲ್ಟಿಪ್ಲಕ್ಸ್ ನಲ್ಲಿ ಒಂದು ಫಿಲಂ ರಿಲೀಸ್ ಆದ್ರೆ. ಫಸ್ಟ್ ವೀಕ್ ನ  ಕಲೆಕ್ಷನ್ ನ 50% ಅನ್ನು ಫಿಲಂ ಡಿಸ್ಟ್ರಿಬ್ಯೂಟರ್ ಗೆ ಕೊಡಬೇಕು. ಅವಾಗ ಮಾಲ್ ಗಳು ಫಿಲಂ ಟಿಕೆಟ್ ನಿಂದ ಜಾಸ್ತಿ ಹಣ ಮಾಡೋಕೆ ಆಗಲ್ಲ. ಆಗ ಮಾಲ್ ನವರಿಗೆ ಹೊಳೆದ ಐಡಿಯಾನೇ ಇದು.. ಅದೇ ಪಾಪ್ ಕರ್ನ್ ರೇಟ್ ಹೆಚ್ಚಿಸೋದು. ಅರೆ ರೇಟ್ ಹೆಚ್ಚು ಮಾಡಿದ್ರೆ ಜನ ಪಾಪ್ ಕರ್ನ್ ಕೊಳ್ಳಲ್ಲ. ಸುಮ್ನೆ ಜನ ಬಂದವರು ಪಿಕ್ಚರ್ ನೋಡಿ ಮನೆಗೋದ್ರೆ ಲಾಸ್ ಮಾಲ್ನವರಿಗೆ ಅನ್ನಬಹುದು.  ಅಸಲಿ ಮ್ಯಾಟ್ರು ಇರೋದೇ ಇಲ್ಲಿ. ಕಡಿಮೆ ಬೆಲೆ ಮಾಡಿದ್ರೆ ಜನ ಮುಗಿಬಿಳ್ತಾರೆ. ಕ್ಯೂ ನಿಲ್ತಾರೆ. ಇಂಟರ್ ವಲ್ ಟೈಮ್ ಟೈಮ್ ಕಡಿಮೆ ಇರೋದ್ರಿಂದ ಕೌಂಟರ್ ಜಾಸ್ತಿ ಮಾಡ್ಬೇಕಾಗುತ್ತೆ. ಅಲ್ಲಿ ಸರ್ವ ಮಾಡೋಕೆ ಎಂಪ್ಲೋಯ್ಸ್ ಮತ್ತ್ ಅವ್ರು ಖರ್ಚು ವೆಚ್ಚ ಜಾಸ್ತಿ ಆಗುತ್ತೆ. ಇದ್ರಿಂದ ಥೇಟರ್ ಖರ್ಚೆ ಜಾಸ್ತಿ ಆಗುತ್ತೆ. ಅದ್ಕೆ ಮೂವಿ ಟಿಕೆಟ್ ಹೆಚ್ಚಿಸೋ ಬದಲಿಗೆ ಪಾಪ್ ಕಾರ್ನ್ ರೇಟ್ ಹೆಚ್ಚಿಸೋದ್. ಹತ್ ರಲ್ಲಿ ಇಬ್ಬರು ಪಾಪ್ ಕರ್ನ್ ಕೊಂಡರೂ ಅವರ ಬಿಸಿನೆಸ್ ಅಮೌಂಟ್ ಬಂದಿರುತ್ತೆ. ಎಷ್ಟೇ ಆಗ್ಲಿ ಮಾಲ್ ಗಳಿಗೆ ಹೆಚ್ಚಾಗಿ ಹೋಗೋರು ಕೂಡಾ ಯಾರು ಅಂತಾ ಎಲ್ರಿಗೂ ಗೊತ್ತು. 

Comments

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು