ಬಹುಮುಖ
ಬಹುಮುಖ
ನೀನಿವತ್ತು ಜನ ನಾಯಕ
ಸೇವೆಯೇ ನಿನ್ನ ಕಾಯಕ
ಗೊತ್ತಿಲ್ಲ ನಿನಗಾವುದು ಕುಹಕ
ಅದಕ್ಕೇ ನೀ ಹತ್ತೂರಿನ ಧನಿಕ
ನಿನ್ನ ಸಾಧನೆಗೆ ನಾ ಭಾವುಕ
ನಿನ್ನದೋ ಪ್ರತಿಭೆ ಬಹುಮುಖ
ಗೊತ್ತಿಲ್ಲ ನೆನಪಾಯ್ತು ಈಗ್ಯಾಕ
ಅದೆಷ್ಟು ನಕ್ಕಿದ್ದೆವು ಪಕ ಪಕ
ಆಗ ನೀ ಬಾಲಕ
ನಿನ್ನಮ್ಮ ಹೇಳುವಾಗ..
"ಅವನಿಗೆ ಚಡ್ಡಿ ಯಾಕ...?
ಹೊಟ್ಟಿಗೆ ಹಿಟ್ಟಿಲ್ಲದಾಗ..
ಅವನಿಗೆ ಚಡ್ಡಿ ಯಾಕ..?"
ಅವನಿಗೆ ಚಡ್ಡಿ ಯಾಕ..?
ನೀನಿವತ್ತು ಜನ ನಾಯಕ
ಸೇವೆಯೇ ನಿನ್ನ ಕಾಯಕ
ಗೊತ್ತಿಲ್ಲ ನಿನಗಾವುದು ಕುಹಕ
ಅದಕ್ಕೇ ನೀ ಹತ್ತೂರಿನ ಧನಿಕ
ನಿನ್ನ ಸಾಧನೆಗೆ ನಾ ಭಾವುಕ
ನಿನ್ನದೋ ಪ್ರತಿಭೆ ಬಹುಮುಖ
ಗೊತ್ತಿಲ್ಲ ನೆನಪಾಯ್ತು ಈಗ್ಯಾಕ
ಅದೆಷ್ಟು ನಕ್ಕಿದ್ದೆವು ಪಕ ಪಕ
ಆಗ ನೀ ಬಾಲಕ
ನಿನ್ನಮ್ಮ ಹೇಳುವಾಗ..
"ಅವನಿಗೆ ಚಡ್ಡಿ ಯಾಕ...?
ಹೊಟ್ಟಿಗೆ ಹಿಟ್ಟಿಲ್ಲದಾಗ..
ಅವನಿಗೆ ಚಡ್ಡಿ ಯಾಕ..?"
ಅವನಿಗೆ ಚಡ್ಡಿ ಯಾಕ..?
Comments