ಹಸಿವು ಯಾರಿಗಿಲ್ಲ...!
ಹಸಿವು ನೀಗಿದವರಿಗಿಲ್ಲಿ
ಅನ್ನದ ಋಣವಿಲ್ಲ,
ಕೂಳುಬಾಕರಿಗಿಲ್ಲಿ
ಹಸಿವೆ ಇಲ್ಲ.
ಕೂಲಿಮಾಡಿದರೂ
ಕರುಳ ನೋಯಿಸಲಿಲ್ಲ,
ಉಂಡು ಎದ್ದವರಿಗೆ
ಆ ಕರುಳೆ ಇಲ್ಲ.
ಕಡ ತಂದು ಖಾರ ಅರೆದರೂ
ಕಾಳು ಸಾಸಿವೆ ಮನೆಯಲಿಲ್ಲ,
ಕಾದ ಹೊರಟವನಿಗೆ
ಹಸಿವ ನೀಗುವುದು ಕಷ್ಟವೇನಲ್ಲ.
ಬೇಡಿ ಬಂದರೂ
ಭಿಕ್ಷುಕರಿಗೆ ಇಲ್ಲವೆನ್ನಲಿಲ್ಲ,
ಬಂದವರ ಬದಿದೊಡಿಸುವ
ಭಂಡ ಮಕ್ಕಳಂತಲ್ಲ.
ಸಂಕಷ್ಟದ ಬದುಕಲ್ಲಿ
ವಾರಕ್ಕೆರಡುದಿನ ಊಟವಿಲ್ಲ,
ಅದಕ್ಕೆ ಮಕ್ಕಳಿಗೆ
ಸಂಕಷ್ಟವಿಲ್ಲ.
ತಾಯಿ ಬೇಡುವುದು
ಇನ್ನೇನು ಅಲ್ಲ,
ಮಕ್ಕಳಿಗೆ ಈ ಬುದ್ದಿ
ಯಾಕೆ ಕೊಡಲಿಲ್ಲ.
ಸಂಭ್ರಮದ ಸೋಗಿನಲ್ಲಿ
ಅವಳನ್ನೇ ಮರೆತಿರಲ್ಲ,
ಪ್ರೀತಿಗಾಗಿ ಪರಿತಪಿಸಿ
ದಿನ ದೂಡುತ್ತಿದ್ದಾಳಲ್ಲ.
ಅವಳು ಅದ್ಹೇಗೆ
ಸಂಭಾಳಿಸಿದಳು ನಮ್ಮನ್ನೆಲ್ಲ,
ಇದು ಬರೀ
ಪ್ರಶ್ನೆಯಲ್ಲ.
ಈಗಿವಳ ಮಾತು
ಯಾರಿಗೂ ಕೇಳಿಸಲ್ಲ,
ಇವರಿದೂ ಅದು
ಬೇಕಿಲ್ಲ,
ಕಾರಣ...
ಹಸಿವೆಂದರೇನೆಂಬುದು
ಇವರಿಗೆ ಗೊತ್ತಿಲ್ಲ,
ಇವರಿಗೆ ಗೊತ್ತಿಲ್ಲ.
ಅನ್ನದ ಋಣವಿಲ್ಲ,
ಕೂಳುಬಾಕರಿಗಿಲ್ಲಿ
ಹಸಿವೆ ಇಲ್ಲ.
ಕೂಲಿಮಾಡಿದರೂ
ಕರುಳ ನೋಯಿಸಲಿಲ್ಲ,
ಉಂಡು ಎದ್ದವರಿಗೆ
ಆ ಕರುಳೆ ಇಲ್ಲ.
ಕಡ ತಂದು ಖಾರ ಅರೆದರೂ
ಕಾಳು ಸಾಸಿವೆ ಮನೆಯಲಿಲ್ಲ,
ಕಾದ ಹೊರಟವನಿಗೆ
ಹಸಿವ ನೀಗುವುದು ಕಷ್ಟವೇನಲ್ಲ.
ಬೇಡಿ ಬಂದರೂ
ಭಿಕ್ಷುಕರಿಗೆ ಇಲ್ಲವೆನ್ನಲಿಲ್ಲ,
ಬಂದವರ ಬದಿದೊಡಿಸುವ
ಭಂಡ ಮಕ್ಕಳಂತಲ್ಲ.
ಸಂಕಷ್ಟದ ಬದುಕಲ್ಲಿ
ವಾರಕ್ಕೆರಡುದಿನ ಊಟವಿಲ್ಲ,
ಅದಕ್ಕೆ ಮಕ್ಕಳಿಗೆ
ಸಂಕಷ್ಟವಿಲ್ಲ.
ತಾಯಿ ಬೇಡುವುದು
ಇನ್ನೇನು ಅಲ್ಲ,
ಮಕ್ಕಳಿಗೆ ಈ ಬುದ್ದಿ
ಯಾಕೆ ಕೊಡಲಿಲ್ಲ.
ಸಂಭ್ರಮದ ಸೋಗಿನಲ್ಲಿ
ಅವಳನ್ನೇ ಮರೆತಿರಲ್ಲ,
ಪ್ರೀತಿಗಾಗಿ ಪರಿತಪಿಸಿ
ದಿನ ದೂಡುತ್ತಿದ್ದಾಳಲ್ಲ.
ಅವಳು ಅದ್ಹೇಗೆ
ಸಂಭಾಳಿಸಿದಳು ನಮ್ಮನ್ನೆಲ್ಲ,
ಇದು ಬರೀ
ಪ್ರಶ್ನೆಯಲ್ಲ.
ಈಗಿವಳ ಮಾತು
ಯಾರಿಗೂ ಕೇಳಿಸಲ್ಲ,
ಇವರಿದೂ ಅದು
ಬೇಕಿಲ್ಲ,
ಕಾರಣ...
ಹಸಿವೆಂದರೇನೆಂಬುದು
ಇವರಿಗೆ ಗೊತ್ತಿಲ್ಲ,
ಇವರಿಗೆ ಗೊತ್ತಿಲ್ಲ.
Comments