ಬದುಕು ಭ್ರಮೆ..!?
ಬದುಕು ಭ್ರಮೆಯಲಿ ಬೆಂದು
ಸಾಗುತಿಹುದು ಮುಂದು.
ವಲ್ಲೆನೆಂದರು ಬಂದು
ನಿಂತಿಹಳು ಮನದಲಿಂದು.
ಕತ್ತಲನೋವ ಚಿವುಟಿ
ಬಾಳು ಬೆಳಗಲೆಂದು.
ಬಿಸಿಲು ಮಳೆಗಂಜದ
ದೃಢ ನಿಲುವು ತನ್ನದೆಂದು.
ಅದ್ಯಾವ ಬಂಧ ತೂಡರಿತು
ಅವಳು ನಿನಗಲ್ಲವೆಂದು.
ಇನ್ನೊಬ್ಬರ ವ್ಯಾಕುಲಕೆ
ಪ್ರೀತಿ ಸಿಗಲಿಲ್ಲವೆಂದು.
ತಪ್ಪು ತಿಳಿದು
ಗತಿಸಿದ ಘಟನೆಗೆ ಕಾರಣ ಇವಳೆಂದು.
ಸಾಗಿಹುದು ಜೀವ
ಕಣ್ಣಲ್ಲೇ ಬದುಕು ಕಟ್ಟಿಕೊಂಡು.
ಯಾರಿಗೇಳಲಿ ಈ
ಭ್ರಮೆಯ ಬಂಧನ ಘಟ್ಟಿ ಎಂದು.
ತಿಳಿದು ಸಾಯುತಿರುವಾಗ
ಅವಳ ನೆನಪಲ್ಲೇ ಇಂದು.
ಅವಳ ನೆನಪಲ್ಲೇ ಮಿಂದು.
ಸಾಗುತಿಹುದು ಮುಂದು.
ವಲ್ಲೆನೆಂದರು ಬಂದು
ನಿಂತಿಹಳು ಮನದಲಿಂದು.
ಕತ್ತಲನೋವ ಚಿವುಟಿ
ಬಾಳು ಬೆಳಗಲೆಂದು.
ಬಿಸಿಲು ಮಳೆಗಂಜದ
ದೃಢ ನಿಲುವು ತನ್ನದೆಂದು.
ಅದ್ಯಾವ ಬಂಧ ತೂಡರಿತು
ಅವಳು ನಿನಗಲ್ಲವೆಂದು.
ಇನ್ನೊಬ್ಬರ ವ್ಯಾಕುಲಕೆ
ಪ್ರೀತಿ ಸಿಗಲಿಲ್ಲವೆಂದು.
ತಪ್ಪು ತಿಳಿದು
ಗತಿಸಿದ ಘಟನೆಗೆ ಕಾರಣ ಇವಳೆಂದು.
ಸಾಗಿಹುದು ಜೀವ
ಕಣ್ಣಲ್ಲೇ ಬದುಕು ಕಟ್ಟಿಕೊಂಡು.
ಯಾರಿಗೇಳಲಿ ಈ
ಭ್ರಮೆಯ ಬಂಧನ ಘಟ್ಟಿ ಎಂದು.
ತಿಳಿದು ಸಾಯುತಿರುವಾಗ
ಅವಳ ನೆನಪಲ್ಲೇ ಇಂದು.
ಅವಳ ನೆನಪಲ್ಲೇ ಮಿಂದು.
Comments