ನಿಜವಾದ ಪ್ರಜಾಪ್ರಭುತ್ವ ಯಾವುದು..?
ನಿಜವಾದ ಪ್ರಜಾಪ್ರಭುತ್ವ ಯಾವುದು..? ನಮ್ಮ್ ದೇಶದಲ್ಲಿ ಇದರ ಮೂಲ ಅರ್ಥನ ತುಂಬಾ ಜನ ತಪ್ಪಾಗಿ ತಿಳ್ಕೊಂಡಿದ್ದಾರೆ. ದೇಶದಲ್ಲಿ ಆಗಾಗ ಎಲೆಕ್ಷನ್ ಆಗ್ತಾವೆ, ನಾವ್ ಕ್ಯೂ ನಲ್ಲಿ ನಿಂತು ಓಟಾಕ್ತಿವಿ, ಆಗ ಆ ದೇಶ ಡೆಮೋಕ್ರ್ಯಾಟಿಕ್ ಅಂದ್ರೆ ಪ್ರಜಾಪ್ರಭುತ್ವ ದೇಶ ಅಂತ ಕೆಲ ಜನ ತಿಳ್ಕೊಂಡಿದ್ದಾರೆ. ಆದ್ರೆ ನಿಮಗೆ ಗೊತ್ತಾ..? ಉತ್ತರ ಕೊರಿಯಾ ದಲ್ಲೂ ಎಲೆಕ್ಷನ್ ಆಗುತ್ತೆ. ನಾನ್ ಇದನ್ನ ಉತ್ಪ್ರೇಕ್ಷೆ ಯಾಗಿ ಹೇಳ್ತಿಲ್ಲ. ನಿಮಿಗೆ ತಮಾಷೆ ಅನ್ನಿಸುತ್ತೆ ನಾನ್ ಹೇಳೋದು. ಅಲ್ಲಿ ಪಕ್ಕಾ 100 ಪರ್ಸೆಂಟ್ ಓಟಿಂಗ್ ನಡೆಯುತ್ತೆ. ಅಲ್ಲೂ ಕೂಡಾ ನಮ್ಮಂತೆ ಎಲೆಕ್ಷನ್ ನಡಿತಾ ಇರ್ತಾವೆ. ಆದ್ರೆ 50 ರಿಂದ 80 90 ಪರ್ಸೆಂಟ್ ಒಟಿಂಗ್ ಆಗಲ್ಲ. 100 ಪರ್ಸೆಂಟ್ ಒಟಿಂಗ್ ಆಗೇ ಆಗುತ್ತೆ. ಆ ದೇಶದ ಯಾರಾದ್ರೂ ಒಬ್ಬ ಪ್ರಜೆ ಅಲ್ಲಿ ನಿಂತ ಅಧಿಕೃತ ಅಭ್ಯರ್ಥಿ ಗೆ ಓಟ್ ಹಾಕ್ಲಿಲ್ಲ ಅಂದ್ರೆ ಅವ್ರು ದೇಶ ವಿರೋಧಿಗಳು ಅಂತಾ ಮಾರ್ಕ್ ಆಗ್ತಾರೆ. ಅವ್ರು ಜಾಬ್ ಕಳ್ಕೊಳ್ತಾರೆ. ಇಲ್ಲಿ ಜಾಬ್ ಮಾಡೋರಿದ್ರೆ ತಾನೇ ಅಂತಾ ಮೂಗ್ ಮುರಿಬೇಡಿ. ಅವ್ರು ಮನೆ ಕಳ್ಕೊಳ್ತಾರೆ. ಓಟ್ ಹಾಕ್ದೆ ಮನೇಲಿ ಮಜಾ ಮಾಡೋರೂ ನಮ್ ದೇಶದಲ್ಲಿ ಇದ್ದಾರಲ್ವಾ..? ಅಲ್ಲಿ ಪ್ರಜಾಪ್ರಭುತ್ವ ಅನ್ನೋ ಒಂದು ವರ್ಡ್ ಅಷ್ಟೇ ಅಲ್ಲ ಆ ದೇಶದ ಅಧಿಕೃತ ಹೆಸರು ಕೂಡಾ ಹೌದು. ಆಶ್ಚರ್ಯ ಆಗ್ತಿದ್ಯಾ. ಪ್ರಜಾಪ್ರಭುತ್ವ ಪದ ಉತ್ತರ ಕೊರಿಯಾ ದೇಶದ ಹೆಸರಲ್ಲಿ ಇದೆ. ಉತ್ತರ ಕೊರಿಯಾ ತನ್ನನ್ನು ತಾನು D...