Posts

Showing posts from August, 2019

ಅವನಿಗೆ ಈಗ ಅಷ್ಟೇ...!

ಅವನಿಗೆ ಈಗ ಅಷ್ಟೇ...! ಕಂಡಿರಲಿಲ್ಲ ಕನಸು ಅಂದುಕೊಂಡಿದ್ದು ಅಷ್ಟೇ... ರೊಚ್ಛಿಗೆದ್ದಾಗ ಮುನಿಸು ಬಾಲ್ಯ ಕಾಣಲಿಲ್ಲ ಅಷ್ಟೇ.. ಓದುವ ವಯಸ್ಸು ಪುಸ್ತಕದ ಹುಳು ಅಷ್ಟೇ... ದುಡಿಯುವ ಹುಮ್ಮಸ್ಸು ಸುಮ್ಮನಿರಲಿಲ್ಲ ಅಷ್ಟೇ.. ದಂಗಾಗಲಿಲ್ಲ ಬರಿ ಊರ ಜನರಷ್ಟೇ..! ಕಟ್ಟಿದಾಗ ಕೋಟಿ ಕೋಟಿ TAX ಈಗ ಅಷ್ಟೇ...! ಅವನಿಗೆ ಅದು ಬರಿ ಅಷ್ಟೇ..! ಬರೀ ಅಷ್ಟೇ.!

ಬಹುಮುಖ

ಬಹುಮುಖ ನೀನಿವತ್ತು ಜನ ನಾಯಕ ಸೇವೆಯೇ ನಿನ್ನ ಕಾಯಕ ಗೊತ್ತಿಲ್ಲ ನಿನಗಾವುದು ಕುಹಕ ಅದಕ್ಕೇ ನೀ ಹತ್ತೂರಿನ ಧನಿಕ ನಿನ್ನ ಸಾಧನೆಗೆ ನಾ ಭಾವುಕ ನಿನ್ನದೋ ಪ್ರತಿಭೆ ಬಹುಮುಖ ಗೊತ್ತಿಲ್ಲ ನೆನಪಾಯ್ತು ಈಗ್ಯಾಕ ಅದೆಷ್ಟು ನಕ್ಕಿದ್ದೆವು ಪಕ ಪಕ ಆಗ ನೀ ಬಾಲಕ ನಿನ್ನಮ್ಮ ಹೇಳುವಾಗ.. "ಅವನಿಗೆ ಚಡ್ಡಿ ಯಾಕ...? ಹೊಟ್ಟಿಗೆ ಹಿಟ್ಟಿಲ್ಲದಾಗ.. ಅವನಿಗೆ ಚಡ್ಡಿ ಯಾಕ..?" ಅವನಿಗೆ ಚಡ್ಡಿ ಯಾಕ..?