Posts

Showing posts from November, 2011

ಮನದ ಮುಂಜಾವು

ಬೆಳಗಾಗುತಿರಲು ಬೆಚ್ಚಗೆ ಹೊದ್ದು ಬರಲು, ಮಿಟುಕಿಸಿದ ಕಣ್ಣು ಮನದಲ್ಲೆ ಕುಳಿತಿರಲು, ಹೋಗೋಣವೆಂದಳು ಎದ್ದೆಮ್ಮೆಯಾಡಿಸಲು... ಅದೆಂತಹ ನಗು ಭೀರಿದಳು ಎನ್ನಮನ ಭ್ರಮೆಯಿಂದೊರಬರಲು ನೆನಪಾಗಲು ನನಗೆ ನಾ ಕುಣಿಕೆ ಬಿಚ್ಚಿದ ಕರು ಜಿಗಿದೋಡುತಿರಲು... ಮುಂಜಾವಿಗೆ ಮೈ ಕೊಡವಿ ಜೊತೆಗೂಡಿ ಮೆಯುತಿರಲು ಬಣ್ಣಿಸಿದಳಾಕೆ ದನಗಳ ಅವೆಷ್ಟು ಮುಗ್ದ ರಾಸುಗಳು...! ಸೂರ್ಯನ ಹೊಂಗಿರಣ ಇಬ್ಬನಿ ಹೀರುತಿರಲು ಒಣ ಕಟ್ಟಿಗೆ ಹೆಕ್ಕಿ ತರಲು ಹಚ್ಚಿದಳು ಕಿಚ್ಚು, ಮನಸು ಬಿಸಿಯಗಿರಲು... ಅದೆಷ್ಟು ಸಂಭ್ರಮಿಸಿದಳು ಕಡ್ಡಿಬುವದಾಟದಲಿ ನಾನವಳಿಗೆ ಸೋತಿರಲು ತಿಳಿಯದೆ... ನನ್ನನ್ನೇ ನಾ ಮರೆತಿರಲು... ಬಸ್ಸು ಬುರ್ರೆನ್ನಲು ಶಾಲೆ ನೆನಪಾಗಲು ಎಮ್ಮೆಮೇಲೆ ಕೂತುಬರಲು ಇಳಿಎಂದಳಾಕೆ ನೀನೆಷ್ಟು ಭಾರ... ಹೇಳಲಾಗದೆ, ಹೃದಯದಲಿ ಕುಳಿತ ನೀನೆಷ್ಟು ಭಾರ....!

ಹಸಿವು ಯಾರಿಗಿಲ್ಲ...!

ಹಸಿವು ನೀಗಿದವರಿಗಿಲ್ಲಿ ಅನ್ನದ ಋಣವಿಲ್ಲ, ಕೂಳುಬಾಕರಿಗಿಲ್ಲಿ ಹಸಿವೆ ಇಲ್ಲ. ಕೂಲಿಮಾಡಿದರೂ ಕರುಳ ನೋಯಿಸಲಿಲ್ಲ, ಉಂಡು ಎದ್ದವರಿಗೆ ಆ ಕರುಳೆ ಇಲ್ಲ. ಕಡ ತಂದು ಖಾರ ಅರೆದರೂ ಕಾಳು ಸಾಸಿವೆ ಮನೆಯಲಿಲ್ಲ, ಕಾದ ಹೊರಟವನಿಗೆ ಹಸಿವ ನೀಗುವುದು ಕಷ್ಟವೇನಲ್ಲ. ಬೇಡಿ ಬಂದರೂ ಭಿಕ್ಷುಕರಿಗೆ ಇಲ್ಲವೆನ್ನಲಿಲ್ಲ, ಬಂದವರ ಬದಿದೊಡಿಸುವ ಭಂಡ ಮಕ್ಕಳಂತಲ್ಲ. ಸಂಕಷ್ಟದ ಬದುಕಲ್ಲಿ ವಾರಕ್ಕೆರಡುದಿನ ಊಟವಿಲ್ಲ, ಅದಕ್ಕೆ ಮಕ್ಕಳಿಗೆ ಸಂಕಷ್ಟವಿಲ್ಲ. ತಾಯಿ ಬೇಡುವುದು ಇನ್ನೇನು ಅಲ್ಲ, ಮಕ್ಕಳಿಗೆ ಈ ಬುದ್ದಿ ಯಾಕೆ ಕೊಡಲಿಲ್ಲ. ಸಂಭ್ರಮದ ಸೋಗಿನಲ್ಲಿ ಅವಳನ್ನೇ ಮರೆತಿರಲ್ಲ, ಪ್ರೀತಿಗಾಗಿ ಪರಿತಪಿಸಿ ದಿನ ದೂಡುತ್ತಿದ್ದಾಳಲ್ಲ. ಅವಳು ಅದ್ಹೇಗೆ ಸಂಭಾಳಿಸಿದಳು ನಮ್ಮನ್ನೆಲ್ಲ, ಇದು ಬರೀ ಪ್ರಶ್ನೆಯಲ್ಲ. ಈಗಿವಳ ಮಾತು ಯಾರಿಗೂ ಕೇಳಿಸಲ್ಲ, ಇವರಿದೂ ಅದು ಬೇಕಿಲ್ಲ, ಕಾರಣ... ಹಸಿವೆಂದರೇನೆಂಬುದು ಇವರಿಗೆ ಗೊತ್ತಿಲ್ಲ, ಇವರಿಗೆ ಗೊತ್ತಿಲ್ಲ.

ಬದುಕು ಭ್ರಮೆ..!?

ಬದುಕು ಭ್ರಮೆಯಲಿ ಬೆಂದು ಸಾಗುತಿಹುದು ಮುಂದು. ವಲ್ಲೆನೆಂದರು ಬಂದು ನಿಂತಿಹಳು ಮನದಲಿಂದು. ಕತ್ತಲನೋವ ಚಿವುಟಿ ಬಾಳು ಬೆಳಗಲೆಂದು. ಬಿಸಿಲು ಮಳೆಗಂಜದ ದೃಢ ನಿಲುವು ತನ್ನದೆಂದು. ಅದ್ಯಾವ ಬಂಧ ತೂಡರಿತು ಅವಳು ನಿನಗಲ್ಲವೆಂದು. ಇನ್ನೊಬ್ಬರ ವ್ಯಾಕುಲಕೆ ಪ್ರೀತಿ ಸಿಗಲಿಲ್ಲವೆಂದು. ತಪ್ಪು ತಿಳಿದು ಗತಿಸಿದ ಘಟನೆಗೆ ಕಾರಣ ಇವಳೆಂದು. ಸಾಗಿಹುದು ಜೀವ ಕಣ್ಣಲ್ಲೇ ಬದುಕು ಕಟ್ಟಿಕೊಂಡು. ಯಾರಿಗೇಳಲಿ ಈ ಭ್ರಮೆಯ ಬಂಧನ ಘಟ್ಟಿ ಎಂದು. ತಿಳಿದು ಸಾಯುತಿರುವಾಗ ಅವಳ ನೆನಪಲ್ಲೇ ಇಂದು. ಅವಳ ನೆನಪಲ್ಲೇ ಮಿಂದು.