ಮನದ ಮುಂಜಾವು
ಬೆಳಗಾಗುತಿರಲು ಬೆಚ್ಚಗೆ ಹೊದ್ದು ಬರಲು, ಮಿಟುಕಿಸಿದ ಕಣ್ಣು ಮನದಲ್ಲೆ ಕುಳಿತಿರಲು, ಹೋಗೋಣವೆಂದಳು ಎದ್ದೆಮ್ಮೆಯಾಡಿಸಲು... ಅದೆಂತಹ ನಗು ಭೀರಿದಳು ಎನ್ನಮನ ಭ್ರಮೆಯಿಂದೊರಬರಲು ನೆನಪಾಗಲು ನನಗೆ ನಾ ಕುಣಿಕೆ ಬಿಚ್ಚಿದ ಕರು ಜಿಗಿದೋಡುತಿರಲು... ಮುಂಜಾವಿಗೆ ಮೈ ಕೊಡವಿ ಜೊತೆಗೂಡಿ ಮೆಯುತಿರಲು ಬಣ್ಣಿಸಿದಳಾಕೆ ದನಗಳ ಅವೆಷ್ಟು ಮುಗ್ದ ರಾಸುಗಳು...! ಸೂರ್ಯನ ಹೊಂಗಿರಣ ಇಬ್ಬನಿ ಹೀರುತಿರಲು ಒಣ ಕಟ್ಟಿಗೆ ಹೆಕ್ಕಿ ತರಲು ಹಚ್ಚಿದಳು ಕಿಚ್ಚು, ಮನಸು ಬಿಸಿಯಗಿರಲು... ಅದೆಷ್ಟು ಸಂಭ್ರಮಿಸಿದಳು ಕಡ್ಡಿಬುವದಾಟದಲಿ ನಾನವಳಿಗೆ ಸೋತಿರಲು ತಿಳಿಯದೆ... ನನ್ನನ್ನೇ ನಾ ಮರೆತಿರಲು... ಬಸ್ಸು ಬುರ್ರೆನ್ನಲು ಶಾಲೆ ನೆನಪಾಗಲು ಎಮ್ಮೆಮೇಲೆ ಕೂತುಬರಲು ಇಳಿಎಂದಳಾಕೆ ನೀನೆಷ್ಟು ಭಾರ... ಹೇಳಲಾಗದೆ, ಹೃದಯದಲಿ ಕುಳಿತ ನೀನೆಷ್ಟು ಭಾರ....!