Posts

Showing posts from May, 2009

ಉಳಿದಿರುವುದೊಂದೇ

ಮನದಿ ಮುದ್ದಿಸಿ ಮೌನ ಮೆರೆದಾಕೆ ಕಣ್ಣುಬ್ಬ ಏರಿಸಿ ಸುಳ್ಳೇ ಜರಿದಾಕೆ ಅಪ್ಪಿ.. ಒಪ್ಪಿ.. ತಪ್ಪಾಯಿತು ಎಂದಾಕೆ! ಬಯಕೆಯ ಬಸುರಿಯ ಬೇಗೆ ತಡೆದಾಕೆ ಸನಿಹ ದೂರವೆರಡೂ ತೊರೆದಾಕೆ ಭಯದಿ ನೋವ ಏರಿಸಿ ಇಳಿಸಿದಾಕೆ ಬರುವಳೇ ಎನ್ ಬಾಳಲಿ ಸುಖದಾರಿ ತೋರೋಕೆ...? ಛೇ, ಉಳಿದಿರುವುದೊಂದೇ ಬರೀ... ನಂಬಿಕೆ... ನಂಬಿಕೆ..

ಬಯಸಿದ್ದು ತಪ್ಪಾ?

ನಗುವ ಆ ಮೊಗದಲಿ ಸುಗ್ಗಿಯ ಸ್ವಾದ ತುಂಬಿತ್ತು ನುಡಿದವಳ ಸ್ವರದಲ್ಲಿ ಚಿಲಿಪಿಲಿ ನಿನಾದ ಚಿಮ್ಮಿತ್ತು ಭೂರಮೆಯ ಒಡಲಲ್ಲಿ ಅವಳ ಕಲರವ ಮೇಳೈಸಿತ್ತು ತುಂಟ ನೋಟದಲ್ಲಿ ಎನ್ನ ಮನ ಭ್ರಮಿಸಿತ್ತು ಬಯಸಿದಾಕೆಯ ಮನ ಬೆಂದ ನೋವಾಗಿತ್ತು ಓ ಮರುಳೇ...ಬಿಡು ಮುಂದೆ ಮುಟ್ಟಲು ಗುರಿಯೊಂದಿತ್ತು.