'ಪಟಾಕಿ'
ಕಂಡಿದ್ದೆ, ಆ ರಾತ್ರಿ ಸಂಭ್ರಮಿಸಿದ ನನ್ನ ಗೆಳೆಯನ ಅಂದುಕೊಂಡೆ, ನಾನೂ ಸಿಡಿಸಬೇಕು ಪಟಾಕೀನ ಅತ್ತು ಕಾಡಿದೆ ಅಂದೇ ನಮ್ಮಪ್ಪನ ತುಸು ಹುಚ್ಚನಂತೆ, ಬಡಿದು ಸಂಭ್ರಮಿಸಿದ್ದೆ ಗುಂಡುಕಲ್ಲನ್ನ... ನೊಂದ ಅಮ್ಮ ನೀಡಿದ್ದಳು ಮುತ್ತಿನ ಸಾಂತ್ವನ ಹೇಗೆ ಕೊಡಿಸಿಯಾನು ಅಪ್ಪ ಪಟಾಕೀನ ? ಆಗ ಕಿತ್ತು ತಿನ್ನುತ್ತಿತ್ತು ಪಾಪಿ ಬಡತನ.. ಇನ್ನೂ ಮರೆತಿಲ್ಲ, ನಮ್ಮನ್ನೋದಿಸಲು ಅಪ್ಪ ಪಟ್ಟ ಶ್ರಮಾನ ಪಡೆಯುತ್ತಿರುವಾಗ ಅವನೆಟ್ಟ ಗಿಡದ ಫಲಾನ ಈಗ ಮನಸ್ಸಿಲ್ಲ ಏಕೋ ಹೊಡೆಯಲು ಪಟಾಕೀನ ಜೊತೆಗೆ, ಏಕೆ ಹಾಳುಮಾಡಬೇಕು ನಮ್ಮ ಸ್ವಚ್ಚಂದ ಪರಿಸರಾನ.