ಸಾವಿನ ಧರ್ಮ
ಮರಣವಾರ್ತೆ ಹೊತ್ತು ತಂದವನಿಗೆ ಎರಡು ಸೇರು ರಾಗಿ ಕಾಳು , ಅಳೆದು ಕೊಟ್ಟವನಿಗೆ ಅದರ ನೂರುಪಾಲು ಗೋಳು... ಮೌನದ (ಬುದ್ದನ) ಮಾತು ಕೇಳಿದವನಿಗೆ ಯಾಕೀನೋವು ಹೇಳು? ಕೌಡಿ ಕುಟುಂಬ ಉಂಬಲಿಲ್ಲವೇ ನೀ ಕೊಟ್ಟ ಅದೇ ಕಾಳು? ಸಾವಿನಲ್ಲೂ ಮೆರೆವ ಅಂದಿನ ಧರ್ಮದ ಪಾಲು..! ಈಗೆಲ್ಲಿದೆ ಸಾವಿಗೆ ಬೆಲೆಕೊಡುವ ನಿಲುವು? ಎಲ್ಲರೂ ಕಿತ್ತು ತಿನ್ನುತ್ತಿರುವಾಗ ಅವರಿವರ ಕೂಳು, ಕೇಳಿಲ್ಲವೇ... ಜಗದ ಹಾಸಿಗೆಯೇ ನೂರೊಂದು ಮುಳ್ಳಿನ ಬಾಳು, ಕೌಡಿ ತುಳಿದು ಬಂದಂತೆ ಕತ್ತಲೆ ಕಾಡ ಮುಳ್ಳು, ನೀನೆ ಹೇಳು.... ಈಗೆಲ್ಲಿದ್ದಾರೆ ಅಂದಿನ ಆ ಕೌಡಿಆಳು... ನೀ ಕಂಡ ಆ ಬಾಳು.