Posts

Showing posts from September, 2011

"ಮಿಂಚು ಮಿಂಚುಹುಳು ಮತ್ತು ಅವಳು"

Image
ಪ್ರತಿಸಲ ಹೇಳುತಿದ್ದಳು ಮಿಂಚುಹುಳು ಎಷ್ಟು ಚೆನ್ನ ಎಂದು... ಅಂದೇ ನಾ ಛೇಡಿಸಿದ್ದೆ ನೀನು ಅದರದೇ ಜಾತಿಯವಳೆಂದು... ಬೆಂಕಿಪೊಟ್ಟಣದಲ್ಲಿ ಹಿಡಿದುತೋರಿಸಿದ್ದೆ ಬೆಳಕು ಕಾಣಲೆಂದು... ಹಾರಿಬಿಟ್ಟಲು ಹರ್ಷದಿ ಪಾಪ ಅದು ನಮ್ಮಂತೆಂದು... ಆಗಲೇ ಕುಳಿತುಬಿಟ್ಟಳು ಮನದಿ ಮಿಂಚಂತೆ ಅಂದು... ಹೃದಯ ದೀಪ ಅರಿಸಿದ್ದೆ ಆ ಬೆಳಕು ಹರಿಯಲೆಂದು... ಕತ್ತಲ ನೋವ ಶಪಿಸಿದ್ದೆ ಇದಕ್ಕೆ ಮುಕ್ತಿ ಎಂದು...? ಈಗಲೂ ಕಾರುತ್ತಾಳೆ ಆ ಮಿಂಚುಹುಳು ಏಕೆ ತಂದಿದ್ದೆಂದು... ಹೇಳಲಾಗದೆ ಆಕೆ... ನಾನು ನಿನ್ನವಳೆಂದು... ಸದಾ ನಿನ್ನವಳೆಂದು...